ಸೆಪ್ಟೆಂಬರ್‌ 29ರಂದು ನ್ಯೂಯಾರ್ಕ್ ಟೈಮ್ಸ್‌ನ ಟ್ವಿಟರ್ ಸಂವಹನ ವಿಭಾಗದವರು ನ್ಯೂಯಾರ್ಕ್ ಟೈಮ್ಸ್‌ನ ಸೆಪ್ಟೆಂಬರ್ 26ರಂದು ಮುಖಪುಟದಲ್ಲಿ ಪ್ರಕಟವಾದ ಮೋದಿ ಫೋಟೋ ಸಂಪೂರ್ಣ ನಕಲಿ ಸೃಷ್ಟಿ ಎಂದು ಹೇಳಿತು.

ಭಾರತದ ಮತ್ತು ಅವರ ಸಂಪರ್ಕದ ಜಾಲತಾಣಗಳಲ್ಲಿ ವೈರಲ್ ಆದ ಮೋದಿ ಫೋಟೋ ಮತ್ತು ವಿಷಯ ಹಸೀ ಸುಳ್ಳು ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದರೂ ಈ ಬಿಜೆಪಿಯವರಿಗೆ ನಾಚಿಕೆಯಾಗಿಲ್ಲ. ಅದರಲ್ಲಿ ಲೋಕದ ಕೊನೆಯ ಅತ್ಯುತ್ತಮ ಆಶಾಕಿರಣ ಎಂಬ ತಲೆಬರಹ. ಜಗತ್ತಿನ ಅತಿ ಹೆಚ್ಚು ಜನರ ಪ್ರೀತಿ ಪಾತ್ರ, ಶಕ್ತಿಶಾಲಿ ನಾಯಕ ನಮ್ಮನ್ನು ಹರಸಲು ಬಂದಿದ್ದಾರೆ ಎಂಬ ವಾಚಕ.

ಸತ್ಯದ ತಲೆಯ ಮೇಲೆ ಹೊಡೆಯುವಂತೆ ಸುಳ್ಳು ಹೇಳುವುದು ಮೋದಿ ಭಕ್ತರ ಕಲೆ. ಆದರೆ ಪೂರ್ಣ ದೊಡ್ಡಕ್ಷರ ಬಳಸಿದ ಆ ಶೈಲಿ ನ್ಯೂಯಾರ್ಕ್ ಟೈಮ್ಸ್‌ನದಾಗಿರಲಿಲ್ಲ.

ನ್ಯೂಯಾರ್ಕ್ ಟೈಮ್ಸ್ ಕೊರೋನಾ ಎರಡನೆಯ ಅಲೆಯ ಸಂದರ್ಭದಲ್ಲಿ ಮೋದಿಯವರನ್ನು ಟೀಕಿಸಿತ್ತು. ಅದಕ್ಕೆ ಉರಿದು ಟೀಕಿಸಿದ್ದ ಜನ ವಿಶ್ವ ಪ್ರಸಿದ್ಧ ಪತ್ರಿಕೆಯ ಹೆಸರು ದುರುಪಯೋಗಿಸಿಕೊಳ್ಳಲು ನಾಚಿಕೆ ಪಟ್ಟಿಲ್ಲ.