ಮಲ ಹೊರುವ ಪದ್ಧತಿ, ಚರಂಡಿ ಸ್ವಚ್ಛತೆ ಇತ್ಯಾದಿಯಲ್ಲಿನ ಅಮಾನವೀಯತೆ ಬಗೆಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಹಲವು ನಿರ್ದೇಶನಗಳನ್ನು ನೀಡಿತು.

ಚರಂಡಿ ಸ್ವಚ್ಛ ಮಾಡುವಾಗ ಸತ್ತರೆ ಸಂಸಾರಕ್ಕೆ 30 ಲಕ್ಷ ಕನಿಷ್ಟ ಪರಿಹಾರವನ್ನು ಕೋರ್ಟು ಹೇಳಿತು. ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ಮತ್ತು ರವೀಂದ್ರ ಬಟ್ಟ್ ಅವರಿದ್ದ ಸರ್ವೋಚ್ಚ ನ್ಯಾಯಾಲಯ ಪೀಠವು ಮಲಗುಂಡಿ ಸ್ವಚ್ಛ ಮಾಡುವಾಗ ದೈಹಿಕ ಊನಕ್ಕೀಡಾದರೆ ರೂ. 20 ಲಕ್ಷ, ಇತರ ತೊಂದರೆಗೆ ಸಿಲುಕಿದರೆ ರೂ. 10 ಲಕ್ಷ ಪರಿಹಾರ ನೀಡುವಂತೆಯೂ ಸೂಚಿಸಿತು. 

ಮಲಹೊರುವ ಮಂದಿಯ ಅಮಾನವೀಯ ನೆಲೆ ತಪ್ಪಿಸಲು 14 ಸೂತ್ರಗಳನ್ನು ಕೂಡ ಸುಪ್ರೀಂ ಕೋರ್ಟ್ ರಾಜ್ಯ, ಕೇಂದ್ರ ಸರಕಾರಗಳಿಗೆ ನೀಡಿದೆ.