ಮೂಡುಬಿದಿರೆ:  ಜೀವ ದಯಾ ಅಷ್ಟಮಿ ಪ್ರಯುಕ್ತ  ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿಗಳ ವರ ಮಾರ್ಗದರ್ಶನ ಪಾವನ ಉಪಸ್ಥಿತಿಯಲ್ಲಿ ಮೂಡುಬಿದಿರೆ ಜೈನ ಕಾಶಿಯ ವಿವಿಧ ಬಸದಿಗಳಲ್ಲಿ ವಿಶೇಷ ಪೂಜೆ  22.10.23 ರಂದು ಜೀವ ದಯಾ ಅಷ್ಟಮಿ ಪ್ರಯುಕ್ತ ನೆರವೇರಿತು.

ಪ. ಪೂ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಬೆಳಿಗ್ಗೆ ಗಂಟೆ 6.00ರಿಂದ 18ಬಸದಿ ದರ್ಶನ ಮಾಡಿದರು. ಪಾಠ ಶಾಲೆಯಲ್ಲಿ ಪಡoಗಡಿ ಜಿನೇಂದ್ರರ ಜಿನ ವಾಣಿ ಗುಂಪಿನ ಪಂಚ ಪರಮೆಷ್ಟಿ ಆರಾಧನೆಯ ಪಂಚಾಮೃತ ಅಭಿಷೇಕದಲ್ಲಿ ಪಾಲ್ಗೊಂಡು ಶುಭ ಚಿಂತನೆಯ ಪೂಜೆ ಆರಾಧನೆ ಭಕ್ತಿ ಶುದ್ಧ ಆತ್ಮನಾಗಿ ಪರಮ ಪದವಿ ಪ್ರಾಪ್ತಿ ಮಾಡಿಕೊಳ್ಳಲು ಭಕ್ತರಿಗೆ ಸಮ್ಯಕ್ ರತ್ನತ್ರ ಯ ಸಹಾಯಕವಾಗುದು ಎಂದರು. 

ಬೆಳಿಗ್ಗೆ  9.35ಕ್ಕೆ ಶ್ರೀ ಮಠದಲ್ಲಿ ವಿಶೇಷ ಅಭಿಷೇಕ ಪ.ಪೂ ಭಟ್ಟಾರಕ ಸ್ವಾಮೀಜಿ ಪಾವನ ಸಾನ್ನಿಧ್ಯದಲ್ಲಿ ನೆರವೇರಿತು.  10.35ಕ್ಕೆ ಶ್ರೀ ಮಠದಲ್ಲಿ ಬೆಟ್ಕೇರಿ ಮನೆತನ ದಿಂದಧವಳತ್ರಯ ಜೈನ ಕಾಶಿ ಟ್ರಸ್ಟ್ ಪ್ರಕಾಶನ ಮಾಡಿದ ದಿನೇಶ್ ಮುಕ್ತೇಸರರು ದಾನ ಮಾಡಿದ ಪುಸ್ತಕವನ್ನು ಶ್ರೀ ಮಠದಲ್ಲಿ   ಪ. ಪೂ ಸ್ವಾಮೀಜಿ ಬಿಡುಗಡೆ ಮಾಡಿದರು.

ಈ ಸಂಧರ್ಭದಲ್ಲಿ ಪಟ್ಣ ಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಕುಮಾರ್, ಆದರ್ಶ್ ಯಂ ಬಸದಿ ಮುಕ್ತೇಸರರು, ಯಂ ಬಾಹುಬಲಿ ಪ್ರಸಾದ್, ವೈಶಾಲಿ ಬಲ್ಲಾಳ್, ಶ್ರೀನಾಥ್ ಬಲ್ಲಾಳ್, ಜೀವoದರ ಜೈನ್ ಪುತ್ತೂರು,ಮಂಗಳೂರು, ಪದ್ಮ ಪ್ರಸಾದ್ ಕೆ.ಜೆ ಎಸೋಸಿಯೇಷನ್ ಸದಸ್ಯರು ಬೆಂಗಳೂರು

ಮೊದಲಾದವರು ಉಪಸ್ಥಿತರಿದ್ದರು.  11.35 ರಿಂದ 3.00 ರ ವರೆಗೆ ಮಹಾವೀರ ಭವನದಲ್ಲಿ ಸಾಮೂಹಿಕ  ಭೋಜನ ವವಸ್ಥೆ ಶ್ರೀ ಜೈನ ಮಠದ ವತಿಯಿಂದ ಮಾಡಲಾಗಿತ್ತು. ಮಧ್ಯಾಹ್ನ 2.30ರಿಂದ ಸಿದ್ದಕೂಟದಲ್ಲಿ ಸರ್ವ ಪೂಜೆ ಜೆ, ಗಂಟೆ 4.00 ರಿಂದ ಗುರುಗಳ ಬಸದಿಯಲ್ಲಿ ಕ್ಷೀರ ಅಭಿಷೇಕ, ಪೂಜೆ ಮಹಾಮಂಗಳ ಆರತಿ ನೆರವೇರಿತು .

ಸಂಜೆ 5.35ರಿಂದ ಲೆಪ್ಪದ ಬಸದಿಯಲ್ಲಿ ನವರಾತ್ರಿ ಪೂಜೆ ಸಂಜೆ 6.00 ರಿಂದ ಸರಸ್ವತಿ ಪೂಜೆ, ಬೆಂಕಿ ಬಸದಿಯಲ್ಲಿ ಜರುಗಿತು. ರವಿವಾರ ರಜಾ ದಿನವಾದುದರಿಂದ ಬಾರಿ ಸಂಖ್ಯೆಯಲ್ಲಿ ಭಕ್ತರು ಜೈನ ಕಾಶಿ ಬಸದಿ ದರ್ಶನಕ್ಕಾಗಿ ಬಂದಿದ್ದರು. 

ಮಧ್ಯ ಪ್ರದೇಶ, ರಾಜಸ್ಥಾನ್, ಕಲ್ಕತ್ತಾ, ಮಹಾರಾಷ್ಟ್ರ, ತಮಿಳುನಾಡು ಹಾಗೂ  ಕರ್ನಾಟಕದ ನಾನಾ ಭಾಗಗಳಿಂದ ಶ್ರಾವಕ ಶ್ರಾವಿಕೆಯರು ಬೆಳಿಗ್ಗೆ 5.30 ರಿಂದಲೆ ಹದಿನೆಂಟು ಬಸದಿ ದರ್ಶನ ಮಾಡಿ ಪುಣ್ಯರ್ಜನೆ ಮಾಡಿದರು.