ಬಿಲ್ ಪಾವತಿಗೆ ರೂ. 1 ಲಕ್ಷ ಲಂಚ ಕೇಳಿ ಪಡೆಯಲು ಯತ್ನಿಸಿದ ಮಂಗಳೂರು ಕೃಷಿ ಇಲಾಖೆಯ ಉಪ ನಿರ್ದೇಶಕಿ ಭಾರತಮ್ಮ ಅವರನ್ನು ಲೋಕಾಯುಕ್ತ ಪೋಲೀಸರು ಬಂಧಿಸಿದರು.
ಈಗ ನಿವೃತ್ತರಾಗಿರುವ ಎನ್. ಪರಮೇಶ್ವರ ಅವರ ದೂರಿನ ಮೇಲೆ ಈ ಬಂಧನ ಆಗಿದೆ. ಅರಣ್ಯಾಧಿಕಾರಿ ಆಗಿದ್ದ ಪರಮೇಶ್ವರ ಅವರು ನಿಯೋಜನೆ ಮೇಲೆ ಕೃಷಿ ಇಲಾಖೆಯಲ್ಲಿ ಇದ್ದಾಗ ಪ್ರಧಾನ ಮಂತ್ರಿ ಕೃಷಿ ಸಿಂಚನ ಯೋಜನೆಯಡಿ ಬಂಟ್ವಾಳ ತಾಲೂಕಿನ ಹಲವೆಡೆ ಜನ ಕಾಡು ಬೆಳೆಸಲು ಸಸಿ ವಿತರಿಸಿದ್ದರು. ಈ ಸಂಬಂಧ ನರ್ಸರಿ ಮತ್ತು ಗುತ್ತಿಗೆದಾರರಿಗೆ ರೂ. 50 ಲಕ್ಷ ಬಾಕಿ ಇತ್ತು. ಅದಕ್ಕೆ ಭಾರತಮ್ಮ 1 ಲಕ್ಷ ರೂಪಾಯಿ ಲಂಚ ಕೇಳಿದ್ದರು ಎಂದು ದೂರು ದಾಖಲಾಗಿದೆ.