ಕಿನ್ನಿಗೋಳಿ:  ರಾಜ್ಯದಲ್ಲಿ  ಭುಗಿಲೆದ್ದ ಹಿಂಸಾಚಾರದ ಹಿನ್ನಲೆಯಲ್ಲಿ  ದಾಮಸ್ ಕಟ್ಟೆ ರೆಮೆದಿ ಅಮ್ಮನವರ ಇಗರ್ಜಿ ಕಿರೆಂ  ಕಥೋಲಿಕ್ ಸಭಾದ ಆಶ್ರಯದಲ್ಲಿ  ಮೂರುಕಾವೇರಿ ಬಸ್‌ ನಿಲ್ದಾಣದ ಮುಂಭಾಗದಲ್ಲಿ ಮತ್ತು ಕಿನ್ನಿಗೋಳಿ ಕೋಸೆಸಾಂವ್ ಅಮ್ಮನವರ ಇಗರ್ಜಿ ವತಿಯಿಂದ ಚರ್ಚ್ ಮುಂಭಾಗದಲ್ಲಿ ಮತ್ತು ಪಕ್ಷಿಕೆರೆ ಯಾಂತ್ರಿಕ ಕೇಂದ್ರದ ವತಿಯಿಂದ ಪಕ್ಷಿಕೆರೆಯಲ್ಲಿ  ಮೌನ ಪ್ರತಿಭಟನೆ ನಡೆಯಿತು. 

ಈ ಸಂದರ್ಭ ಇಗರ್ಜಿಯ ಧರ್ಮಗುರುಗಳು, ಧರ್ಮಬಗಿಣಿಯರು,  ಮುಖಂಡರು, ಚರ್ಚ್ ವ್ಯಾಪ್ತಿಯ ಕ್ರೈಸ್ತ ಬಾಂಧವರು ಉಪಸ್ಥಿತರಿದ್ದರು.