ಕಿನ್ನಿಗೋಳಿ: ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಬಾರೀ ಮಳೆಯ ಕಾರಣ ತಗ್ಗು ಪ್ರದೇಶ ಜಲಾವೃತವಾಗಿದೆ, ನಂದಿನಿ ಮತ್ತು ಶಾಂಭವಿ ನದಿಗಳು ತುಂಬಿ ಹರಿಯುತ್ತಿದ್ದು, ಕೃಷಿ ಭೂಮಿ ಮುಳುಗಡೆಯಾಗಿದೆ.
ಪಂಜ, ಅತ್ತೂರು, ಕೊಡೆತ್ತೂರು, ಮಿತ್ತಬೈಲ್, ಏಳಿಂಜೆ, ಪಟ್ಟೆ ಮತ್ತಿತರ ಕಡೆಗಳಲ್ಲಿ ರೈತರು ಇತ್ತೀಚೆಗೆ ಭತ್ತದ ನಾಟಿ ಮಾಡಿದ್ದು ನೆರೆ ನೀರಿನಿಂದ ಮುಳುಗಡೆಯಾಗಿದೆ.