ಮುಲ್ಕಿ: ಕಿನ್ನಿಗೋಳಿಯಲ್ಲಿ 76ನೋ ವರ್ಷಚರಣೆಯಲ್ಲಿರುವ ಯುಗಪುರುಷ ಸಂಸ್ಥಾಪಕ ದಿ. ಕೊ. ಅ. ಉಡುಪರ ಸಂಸ್ಮರಣೆ, ಕೊ. ಅ. ಉಡುಪ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿವೇತನ ವಿತರಣೆ,ಅರ್ಚಕ ಸಂಮಾನ, ನೂತನ ಕೃತಿಗಳ ಬಿಡುಗಡೆ ಕಾರ್ಯಕ್ರಮ ಕಿನ್ನಿಗೋಳಿಯ ಯುಗಪುರುಷದ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಕ್ಯಾಂಪ್ಕೋ ಲಿಮಿಟೆಡ್‌ನ ಅಧ್ಯಕ್ಷ ಕಿಶೋರ್‌ಕುಮಾರ್ ಕೊಡ್ಗಿಯವರು ಅಧ್ಯಕ್ಷತೆ ವಹಿಸಿದ್ದರು
ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿದರು.
ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಕೆ. ಬಾಲಕೃಷ್ಣ ಉಡುಪ ರಚಿತ "ಸ್ಫೂರ್ತಿ" ಹಾಗೂ ದೇವೇಂದ್ರ ಅಮೀನ್ ರಚಿತ "ಮಾಯದ ಮಾಣಿಕ್ಯ" ಕೃತಿಗಳನ್ನು ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ| ಹರಿಕೃಷ್ಣ ಪುನರೂರು ಅವರು ಬಿಡುಗಡೆಗೊಳಿಸಿದರು
ಮಂಗಳೂರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಸಂಸ್ಮರಣ ಭಾಷಣ ಮಾಡಿದರು
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮುಂಬೈ ವಿಜಯ ರೆಫ್ರಿಜರೇಶನ್‌ನ ಆಡಳಿತ ವ್ಯವಸ್ಥಾಪಕರಾದ ಟಿ. ರಾಮಚಂದ್ರ ಶೆಟ್ಟ ಎಂಆರ್‌ಪಿಎಲ್‌ನ ಜನರಲ್ ಮ್ಯಾನೇಜರ್ ರುಡಾಲ್ಫ್ ಜೋಯರ್ ನೋರೋನ್ಹಾ, ಬಾಲಕೃಷ್ಣ ಉಡುಪ, ದೇವೇಂದ್ರ ಅಮೀನ್, ಡಾ.ನಯನಾಭಿರಾಮ ಉಡುಪ ವಾಣಿ ಬಿ. ಆಚಾರ್ಯ, ಶರತ್ ಶೆಟ್ಟಿ,ಪು. ಗುರುಪ್ರಸಾದ್ ಕಟೀಲ್, ಕೊಡೆತ್ತೂರು ಭುವನಾಭಿರಾಮ ಉಡುಪ ಪ್ರಧಾನ ಸಂಪಾದಕರು, ಯುಗಪುರುಷ ಕಿನ್ನಿಗೋಳಿ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಕದ್ರಿ ನವನೀತ ಶೆಟ್ಟಿ ಅವರಿಗೆ ಕೊ. ಅ. ಉಡುಪ ಪ್ರಶಸ್ತಿ ಪ್ರದಾನ, ಯುಗಪುರುಷ ಶ್ರೀ ರಾಘವೇಂದ್ರ ಸ್ವಾಮಿ ಮಂದಿರದ ಅರ್ಚಕರಾದ ರಾಘವೇಂದ್ರ ಉಡುಪ ರವರನ್ನು ಕಮಲಾಕ್ಷಿ ಉಡುಪ ಸ್ಮರಣಾರ್ಥ ಅರ್ಚಕರ ನೆಲೆಯಲ್ಲಿ ಗೌರವಿಸಲಾಯಿತು. ಸ್ಥಳೀಯ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ವಿನಾಯಕ ಯಕ್ಷ ಕಲಾ ತಂಡ (ರಿ.) ಕೆರೆಕಾಡು ಇವರಿಂದ "ಅತಿಕಾಯ-ಇಂದ್ರಜಿತು" ಯಕ್ಷಗಾನ ಬಯಲಾಟ ನಡೆಯಿತು.
News and Photos : Sudeep Dsouza Kinnigoli