ಕರ್ನಾಟಕ ಲೇಖಕಿಯರ ಮತ್ತು ವಾಚಕಿಯರ ಸಂಘದಲ್ಲಿ ಕಲೇವಾಸಂನಲ್ಲಿ ಸಾರಾ ದತ್ತಿ ಪ್ರಶಸ್ತಿ ಮತ್ತು ಚಂದ್ರಭಾಗ ರೈ ದತ್ತಿ ಉಪನ್ಯಾಸ.
ಕರ್ನಾಟಕ ಲೇಖಕಿಯರ ಮತ್ತು ವಾಚಕಿಯರ ಸಂಘದಲ್ಲಿ ದತ್ತಿ ಪ್ರಶಸ್ತಿ ನಡೆಯಿತು. ಸಾರಾ ದತ್ತಿ ಪ್ರಶಸ್ತಿಯನ್ನು ಮುದ್ರಾಡಿಯವರಿಗೆ ನೀಡಲಾಯಿತು. ಚಂದ್ರಭಾಗಾ ರೈ ದತ್ತಿ ಪ್ರಶಸ್ತಿಯನ್ನು ಅಕ್ಷತಾ ರೈ ಪೆರ್ಲ ಅವರಿಗೆ ಸಲ್ಲಿಸಲಾಯಿತು.
ಮಂಗಳೂರು ವಿಶ್ವವಿದ್ಯಾನಿಲಯದ ಪ್ರೊಫೆಸರ್‌ಗಳಾದ ಡಾ. ಶಿವರಾಮ ಶೆಟ್ಟಿ ಮತ್ತು ಡಾ. ನಾಗಪ್ಪ ಗೌಡ, ಬಿ. ಎಂ. ರೋಹಿಣಿ ಅವರುಗಳು ದತ್ತಿ ನಿಧಿ ಉಪನ್ಯಾಸಗಳನ್ನು ನೀಡಿದರು.
ಕಲೇವಾಚಂ ಅಧ್ಯಕ್ಷೆಯಾದ ಡಾ. ಜ್ಯೋತಿ ಚೇಳ್ಯಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಕೀನಾ ನಾಸಿರ್ ಮತ್ತು ಡಾ. ಕಾಂತಿ ರೈ ಉಪಸ್ಥಿತರಿದ್ದರು.
ಮೊದಲಿಗೆ ವಿಜಯಲಕ್ಷ್ಮಿ ಬಿ. ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆ ಮಾಡಿದರು. ಜ್ಯೋತಿ ಪ್ರಿಯ ನಿರೂಪಿಸಿದರು, ಆಕೃತಿ ಭಟ್ ಆಶಯ ಗೀತೆ ಹಾಡಿದರು. ಶರ್ಮಿಳಾ ಶೆಟ್ಟಿ ವಂದಿಸಿದರು.