ದಿಲ್ಲಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಗುಜರಾತ್ ಗಲಭೆ ಸಂಬಂಧದ ಇಂಡಿಯಾ, ದ ಮೋದಿ ಕ್ವಶ್ಚನ್ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಪ್ರಯತ್ನಿಸಿದ 24 ವಿದ್ಯಾರ್ಥಿಗಳನ್ನು ಪೋಲೀಸರು ಬಂಧಿಸಿದ್ದಾರೆ.

ಶುಕ್ರವಾರ ಸಂಜೆ 4 ಗಂಟೆಗೆ ನಾರ್ತ್ ಬ್ಲಾಕ್ ‌ನಲ್ಲಿ ಸಾಕ್ಷ್ಯಚಿತ್ರ ತೋರಿಸುವುದಾಗಿ ಎನ್‌ಎಸ್‌ಯುಐ ವಿದ್ಯಾರ್ಥಿ ಸಂಘಟನೆ ಪ್ರಕಟಿಸಿತ್ತು. ಸಂಜೆ 5 ಗಂಟೆಗೆ ಆ ಚಿತ್ರ ಪ್ರದರ್ಶನ ನಡೆಸುವುದಾಗಿ ಭೀಮ್ ಆರ್ಮಿ ಪರ ವಿದ್ಯಾರ್ಥಿಗಳು ತಿಳಿಸಿದ್ದರು. 

ಸಂಜೆ 3 ಗಂಟೆಗೇ ಪೋಲೀಸರು ಈ ಪ್ರದೇಶವನ್ನು ಸುತ್ತುವರಿದಿದ್ದರು. ಇದನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಪ್ರದರ್ಶನಕ್ಕೆ ಅನುಮತಿ ಪಡೆದಿಲ್ಲ. 144 ನಿಷೇಧಾಜ್ಞೆ ಜಾರಿಯಲ್ಲಿದೆ ಎಂದು ಪೋಲೀಸರ ವಾದ. ಅಂತಿಮವಾಗಿ ಪೋಲೀಸರು 24 ವಿದ್ಯಾರ್ಥಿಗಳನ್ನು ಎಳೆದೊಯ್ಯುವ ವೀಡಿಯೋ ವೈರಲ್ ಆಗಿದೆ.