ಭಾರತದ ಪರ ಡಬ್ಲ್ಯಟಿಎ ಪ್ರಶಸ್ತಿ ಗೆದ್ದ ಮೊದಲ ದೇಶೀಯ ಆಟಗಾತಿ ಸಾನಿಯಾ ಮಿರ್ಜಾ ಅವರು ಮೆಲ್ಬೋರ್ನ್‌ನ ರಾಡ್ ಲೇವರ್ ಎರೆನಾದಲ್ಲಿ ಕೊನೆಯ ಗ್ರಾನ್‌ಸ್ಲಾಮ್ ಪಂದ್ಯ ಆಡಿ ಮಿಶ್ರ ಡಬಲ್ಸ್ ರನ್ನರ್ ಅಪ್ ಎನಿಸಿಕೊಂಡರು.
2005ರಲ್ಲಿ ಆಸ್ಟ್ರೇಲಿಯಾ ಓಪನ್ ಟೆನ್ನಿಸ್‌ನಲ್ಲಿ ಮೊದಲ ಗ್ರಾನ್‌ಸ್ಲಾಮ್ ಪಂದ್ಯ ಆಡಿದ್ದೆ. ಅಲ್ಲೇ ಗ್ರಾನ್‌ಸ್ಲಾಮ್‌ಗಳಿಗೆ ವಿದಾಯ ಹೇಳುತ್ತಿದ್ದೇನೆ ಮತ್ತು ಮಗನ ಮುಂದೆ ಗ್ರಾನ್‌ಸ್ಲಾಮ್ ಫೈನಲ್ ಆಡಿದ ತೃಪ್ತಿಯೂ ಇದೆ ಎಂದು ಸಾನಿಯಾ ಬಾವುಕರಾಗಿ ಹೇಳಿದರು. ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ಭಾರತದ ಸಾನಿಯಾ ಮಿರ್ಜಾ ರೋಹನ್ ಬೋಪಣ್ಣ ಜೋಡಿ ಬ್ರೆಜಿಲ್‌ನ ಲುಯಿಸಾ ಸ್ಟೆಫಾನಿ ಮತ್ತು ರಾಫೆಲ್ ಮಸಾಯೋಸ್ ಜೋಡಿಯೆದುರು ಸೋತು ರನ್ನರ್ ಅಪ್ ಆಯಿತು.
22 ವರುಷಗಳ ಹಿಂದೆ ಜೂನಿಯರ್ ಇದ್ದಾಗಲೇ ರೋಹನ್ ಬೋಪಣ್ಣ ಜೊತೆಗೆ ಆಡಿದ್ದೇನೆ. ಇಬ್ಬರೂ ಮಿತ್ರರಾಗಿಯೇ ಇದ್ದೆವು, ಇರುತ್ತೇವೆ ಎಂದರು.
ಆರು ಮಿಶ್ರ ಗ್ರಾನ್‌ಸ್ಲಾಮ್ ಪ್ರಶಸ್ತಿ, ಜೂನಿಯರ್ ಗ್ರಾನ್‌ಸ್ಲಾಮ್ ಸಿಂಗಲ್ಸ್ ಗೆದ್ದಿರುವ ಸಾನಿಯಾ ಮಿರ್ಜಾ ಮೊದಲ ಡಬ್ಲ್ಯುಟಿಎ ಪ್ರಶಸ್ತಿ ಪಡೆದ ಭಾರತದ ಆಟಗಾತಿಯೂ ಹೌದು. ಮಹಿಳಾ ಟೆನ್ನಿಸ್‌ನಲ್ಲಿ ಸಿಂಗಲ್ಸ್, ಡಬಲ್ಸ್ ಎರಡರಲ್ಲೂ ಭಾರತದ ಪರ ಎತ್ತರದ ರಿಯಾಂಕ್ ತಲುಪಿದ್ದ ಆಟಗಾತಿಯೂ ಆಗಿದ್ದರು ಸಾನಿಯಾ.
ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್‌ರನ್ನು ಮದುವೆಯಾಗಿರುವ ಸಾನಿಯಾ ೫ರ ಪುಟ್ಟ ಮಗನೊಂದಿಗೆ ದುಬಾಯಿಯಲ್ಲಿ ವಾಸಿಸುತ್ತಿದ್ದಾರೆ.