ಹಂಪಿಯಲ್ಲಿ ವ್ಯಾಪಾರಿ ಮನೆತನದಲ್ಲಿ ಹುಟ್ಟಿದ್ದ ನಟಿ ಜಮುನಾ ಹೈದರಾಬಾದ್ ಸ್ವಂತ ಮನೆಯಲ್ಲಿ ಜನವರಿ 27ರ ಶುಕ್ರವಾರ ನಿಧನರಾದರು. 

1953ರಲ್ಲಿ ತೆಲುಗು ಪುಟ್ಟಿಲ್ಲು ಮೂಲಕ ನಟಿಯಾದ ನಟಿಯಾದ ಜಮುನಾ ಪಂಚ ಭಾಷಾ ಚಿತ್ರ ನಟಿ. ಕನ್ನಡದಲ್ಲಿ ರಾಜಕುಮಾರರಿಗೆ ನಾಯಕಿಯಾಗಿ ಭೂಕೈಲಾಸ, ಸಾಕ್ಷಾತ್ಕಾರಗಳಲ್ಲಿ ನಟಿಸಿದ್ದ ಅವರು ಕನ್ನಡದಲ್ಲಿ ನಟಿಸಿದ ಚಿತ್ರಗಳ ಸಂಖ್ಯೆ ಕಡಿಮೆ. ರಾಜಕೀಯ ಪ್ರವೇಶಿಸಿ ರಾಜಮಂಡ್ರಿಯಿಂದ ಒಮ್ಮೆ ಸಂಸದೆ ಆಗಿದ್ದ ಅವರು ಸೋತು ರಾಜಕೀಯ ಬಿಟ್ಟರು. ಮಗಳೊಂದಿಗೆ ಹೈದರಾಬಾದಿನಲ್ಲಿ ವಾಸವಿದ್ದರು.