ನಾರ್ತ್ ಸೀ ಕಡಲಿನಲ್ಲಿ ಪೆಟ್ರೋಲಿಯಂ ಮತ್ತು ಅನಿಲ ಉತ್ಪಾದನೆಗೆ ಅನುಮತಿ ನೀಡಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್‌ರ ಮನೆಗೆ ಗ್ರೀನ್ ಪೀಸ್ ಸಂಘಟನೆಯ ಕಾರ್ಯಕರ್ತರು ಕಪ್ಪು ಬಟ್ಟೆ ಹೊದಿಸಿ ಪ್ರತಿಭಟನೆ ನಡೆಸಿದರು.
ನಾರ್ತ್ ಯಾರ್ಕ್‌ಶೈರ್‌ನ ರಿಚ್ಮಂಡ್ ನಗರದಲ್ಲಿ ರಿಷಿ ಸುನಕ್ ಮನೆ ಇದ್ದು, ಅಲ್ಲಿ ಪ್ರತಿಭಟನೆ ಘೋಷಣೆ ನಡೆಯಿತು. ಪ್ರತಿಭಟನಾಕಾರರು ನಿಮಗೆ ಲಾಭ ಮಾತ್ರ ಮುಖ್ಯವೆ, ಪ್ರಜೆಗಳ ಭವಿಷ್ಯ ಅಲ್ಲವೆ ಎಂಬ ಬ್ಯಾನರ್ ಹಿಡಿದಿದ್ದರು.