ಶಿಕ್ಷಕಿ ಒಬ್ಬರಿಗೆ ಗಂಡನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಒಂದು ಲಕ್ಷ ಸುಲಿಗೆ ಮಾಡಲು ನೋಡಿದ ಬೆಳ್ತಂಗಡಿ ತಾಲೂಕಿನ ಅಟ್ರಿಂಜದ ಅಶ್ವಥ್ ಹೆಬ್ಬಾರ್ ಎಂಬವನನ್ನು ವೇಣೂರು ಪೋಲೀಸರು ಬಂಧಿಸಿದರು.
ಟೆಲಿಗ್ರಾಂ ಎಂಬ ಜಾಲ ತಾಣದಲ್ಲಿ ನಕಲಿ ಖಾತೆ ಮೂಲಕ ಪೆರೋಡಿತ್ತಾಯ ಕಟ್ಟೆ ಶಾಲೆಯ ಶಿಕ್ಷಕಿ ಜ್ಯೋತಿಯವರಿಗೆ ಒಂದು ಲಕ್ಷ ಕೊಡು, ಇಲ್ಲದಿದ್ದರೆ ನಿನ್ನ ಗಂಡನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿತ್ತು. ಶಿಕ್ಷಕಿಯು ವೇಣೂರು ಪೋಲೀಸು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎಸ್‌ಐ ಸೌಮ್ಯ ಜೆ. ನೇತೃತ್ವದ ತಂಡ ಸುಲಿಗೆಕೋರನಿಗೆ ಬಲೆ ಹಾಕಿತು.
ಮೊದಲು ಅಳದಂಗಡಿ ಕೆದ್ದು ಬಳಿ ಹಣ ಕೊಡಲು ತಿಳಿಸಿದ್ದ. ಅಲ್ಲಿಗೆ ಹೋದಾಗ ಶಿರ್ಲಾಲು ಸವಣಾಲು ಕ್ರಾಸ್‌ನಲ್ಲಿ ಹಣ ಎಸೆದು ಹೋಗುವಂತೆ ಸಂದೇಶ ಮಾಡಿದ್ದ. ಅದರಂತೆ ಹಣ ಎಸೆಯಲಾಯಿತು. ಸುಲಿಗೆಕೋರ ಹಣ ಎತ್ತಿಕೊಂಡು ಬೈಕ್‌ನಲ್ಲಿ ಓಟ ಕಿತ್ತ. ಪೋಲೀಸರು ಬೆಂಬತ್ತಿ ಗುಂಡೇರಿ ಬಳಿ ಅಶ್ವಥ್ ಹೆಬ್ಬಾರನನ್ನು ಬಂಧಿಸಿದರು.