ಪೆರ್ಮನ್ನೂರ್: ಮಣಿಪುರದಲ್ಲಿ ಭುಗಿಲೆದ್ದ ತೀವ್ರ ಗೊಂಡ ಹಿಂಸಾಚಾರ ಹಾಗೂ ಬೆತ್ತಲೆ ಮೆರವಣಿಗೆ ವಿರೋಧಿಸಿ ತೊಕ್ಕೊಟ್ಟು ವಿನ ಪೆರ್ಮನ್ನೂರಿನಲ್ಲಿರುವ ಸಂತ ಸೆಬೆಸ್ಟಿಯನ್ ಚರ್ಚ್ ಪೆರ್ಮನ್ನೂರ್ ಹಾಗೂ ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಪೆರ್ಮನ್ನೂರು ಘಟಕ ಇದರ ವತಿಯಿಂದ ಚರ್ಚ್ ಮುಂಭಾಗದಲ್ಲಿ ಮೌನ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಥೊಲಿಕ್ ಸಭಾ ಮಂಗಳೂರು ಪ್ರದೇಶ ರಿ ಪೆರ್ಮನ್ನೂರು ಘಟಕದ ಅಧ್ಯಕ್ಷ ಪ್ರಶಾಂತ್ ಡಿ ಸೋಜ ರವರು, ಮಣಿಪುರದಲ್ಲಿ ಕ್ಷುಲ್ಲಕ ಕಾರಣಕ್ಕೆ ಭುಗಿಲೆದ್ದ ಹಿಂಸಾಚಾರ ತೀರ್ವ ಗೊಂಡಿದೆ, ಹಲ್ಲೆ, ಕೊಲೆ ಜೊತೆಗೆ ಮಹಿಳೆಯರ ಬೆತ್ತಲೆ ಮೆರವಣಿಗೆ ಕೂಡಾ ಮಾಡಿಸಿ ಇಡೀ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ. ಇದನ್ನು ಶೀಘ್ರ ನಿಯಂತ್ರಣ ಮಾಡಬೇಕಾಗಿದೆ ಎಂದು ಒತ್ತಾಯಿಸಿದರು.


