ಕೇರಳದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ಕಾಂಗ್ರೆಸ್ಸಿನ ಹಿರಿಯ ನಾಯಕ ಊಮನ್ ಚಾಂಡಿಯವರು 79ರ ಪ್ರಾಯದಲ್ಲಿ ಜುಲಾಯಿ 18ರ ಮಂಗಳವಾರ ಮುಂಜಾವ ನಿಧನರಾದರು.
ಅವರು ಬೆಂಗಳೂರಿನಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಪುತ್ತುಪಲ್ಲಿ ವಿಧಾನ ಸಭಾ ಕ್ಷೇತ್ರದಿಂದ ಚಾಂಡಿಯವರು 1970ರಿಂದ ನಿರಂತರ ಗೆಲುವು ಸಾಧಿಸುತ್ತ ಬಂದವರು. ವಿಶ್ವ ಸಂಸ್ಥೆಯ ಸಾಮಾಜಿಕ ಸೇವಾ ಪ್ರಶಸ್ತಿ ಪಡೆದ ಏಕೈಕ ಮುಖ್ಯಮಂತ್ರಿ ಎಂಬ ಹಿರಿಮೆ ಇವರದಾಗಿದೆ.