ಕರ್ನಾಟಕದಲ್ಲಿ ಒಟ್ಟಾರೆ 36% ಮಳೆ ಕೊರತೆ ಆಗಿದೆ. ಸರಾಸರಿ 166 ಮಿಮೀ ಮಳೆ ಬಿದ್ದಿದೆ ಎಂದು ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಹೇಮಲತಾ ನಾಯಕ ಪ್ರಶ್ನೆಗೆ ಕೃಷಿ ಮಂತ್ರಿ ಚೆಲುವರಾಯಸ್ವಾಮಿ ಉತ್ತರಿಸುತ್ತ ಹೇಳಿದರು.
ಹಿಂದಿನ ಮುಂಬಯಿ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಎಂದು ಉತ್ತರ ಕರ್ನಾಟಕದಲ್ಲಿ ಸರಾಸರಿ 76 ಮಿಮೀ ಮಳೆ ಮಾತ್ರ ಬಂದಿದೆ. ಅಲ್ಲಿ ಮಳೆ ಕೊರತೆ 40%ದಷ್ಟಿದೆ ಎಂದೂ ಅವರು ತಿಳಿಸಿದರು.