ಕಳೆದ ಒಂದು ವರ್ಷಗಳಿಂದ ಕಿಡ್ನಿ ವೈಫಲ್ಯದ ಅನಾರೋಗ್ಯದಿಂದ ಬಳಲುತ್ತಿದ್ದ ಅತ್ತಾವರ ಬಾಬುಗುಡ್ಡೆ ನಿವಾಸಿ ಮತ್ತು ಶ್ರೀದರ್ ಇವರ ಮಗನಾದ ಜಗದೀಶ, ಇವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 40,000ರೂಪಾಯಿಯನ್ನು ಚಿಕಿತ್ಸೆ ವೆಚ್ಚವಾಗಿ, ಮಾಜಿ ಶಾಸಕ ಐವನ್ ಡಿಸೋಜರವರ ಶಿಫಾರಸು ಮೇರೆಗೆ ಮುಖ್ಯ ಮಂತ್ರಿಗಳಾದ ಮಾನ್ಯ ಬಸವರಾಜ್ ಬೊಮ್ಮಾಯಿ ಇವರು ನೀಡಿರುತ್ತಾರೆ. ಕೋರೋನ ಸಂದರ್ಭದಲ್ಲಿ ಮನೆ ಮನೆಗೆ ಕಿಟ್ ವಿತರಿಸುವ ಸಂದರ್ಭದಲ್ಲಿ ಐವನ್ ಡಿಸೋಜರವರ ಗಮನಕ್ಕ ಬಂದು, ಕೂಡಲೇ ಸದ್ರಿಯವರ ದಾಖಲೆ ಪತ್ರ ಪಡೆದು, ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಚಿಕಿತ್ಸೆಗೆ ಸಹಕರಿಸೇಕೆಂದು ಕೋರಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ರೂ.40,000 ಧನ ಸಹಾಯ ಬಿಡುಗಡೆ ಮಾಡಿರುತ್ತಾರೆ. ಇದನ್ನು ಐವನ್ ಡಿಸೋಜಾ ರವರು ಕಚೇರಿಯಲ್ಲಿ ಫಲಾನುಭವಿ ಜಗದೀಶ್ ಇವರಿಗೆ ನೀಡಿರುತ್ತಾರೆ.
