ಮಂಗಳೂರು: ನಗರದ ಬೋಂದೇಲ್ನ ಖ್ಯಾತ ಪರಿಸರ ವಾದಿ, ಶಾಲಾ ಕಾಲೇಜುಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪರಿಸರ ಸಂರಕ್ಷಣೆ ಮತ್ತು ತೋಟಗಾರಿಕೆಯಲ್ಲಿ ತೊಡಗಿರುವ ಕೃಷ್ಣಪ್ಪ ಅವರನ್ನು ಮಂಗಳೂರು ಉತ್ತರ ಇನ್ನರ್ ವೀಲ್ ಕ್ಲಬ್ನ ವತಿಯಿಂದ ಇತ್ತೀಚೆಗೆ ಸನ್ಮಾನಿಸಲಾಯಿತು.
ಈವರೆಗೆ ಮಂಗಳೂರಿನಲ್ಲಿ 10000ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿರುವ 84 ವರ್ಷದ ಕೃಷ್ಣಪ್ಪ ರಾಜ್ಯ ಪ್ರಶಸ್ತಿ ಪುರಸ್ಕೃತರು. ವನ ಮಹೋತ್ಸವ ಕಾರ್ಯಕ್ರಮಕ್ಕಾಗಿ ಪ್ರತಿ ವರ್ಷ ವಿವಿಧ ಸಾಮಾಜಿಕ ಸಂಸ್ಥೆಗಳಿಗೆ ಅವರು ಹಣ್ಣು ಮತ್ತು ಹೂವುಗಳ ಸಸಿಗಳನ್ನು ಪ್ರಾಯೋಜಿಸುವ ಮೂಲಕ ಗಮನ ಸೆಳೆದಿದ್ದಾರೆ. ಸಸಿಗಳನ್ನು ನೆಟ್ಟ ನಂತರ ಕೃಷ್ಣಪ್ಪ ಅವರ ಕೈತೋಟದಲ್ಲೇ ಸನ್ಮಾನಿಸಲಾಯಿತು.
ಮಂಗಳೂರು ಉತ್ತರದ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಡಾ. ಭಾರತಿ ಪ್ರಕಾಶ್, ಕಾರ್ಯದರ್ಶಿ ವಸಂತಿ ಕಾಮತ್, ಉಪಾಧ್ಯಕ್ಷೆ ಮೀರಾ ಕೃಷ್ಣ, ಖಜಾಂಚಿ ಗೀತಾ ರೈ ಪೂರ್ವತನ ಅಧ್ಯಕ್ಷೆಯ ರಾದ ಉಷಾ ಸುಧಾ ಕರ್ಮತ್ತು ಸುಧಾಜಯರಾಂ, ಜಿಲ್ಲಾ ಐಎಸ್ ಒರಜನಿ ಭಟ್, ಪರಿಸರ ಯೋಜನೆಗಳ ಸಂಯೋಜಕಿ ಸೀಮಾ ಸಿಂಘ್ವಿ ಹಾಜರಿದ್ದರು.