ಮುಂಬಯಿ: ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಮುಂಬಯಿ ತನ್ನ 2024ನೇ ಸಾಲಿನ `ಚೆನ್ನಭೈರಾದೇವಿ' ಪ್ರಶಸ್ತಿಯನ್ನು ಇಂದಿಲ್ಲಿ ಪ್ರಕಟಿಸಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನವರ ಮೂಲತಃ ಬೆಳಗಾವಿಯಲ್ಲಿ ಒಂದುವರೆ ದಶಕದಿಂದ ವರ್ಷಗಳ ಕಾಲ ಶಿಕ್ಷಕಿಯಾಗಿದ್ದು ಸದ್ಯ ಅನಾಥಾಶ್ರಮ ನಡೆಸುತ್ತಿರುವ ಶಿರಸಿ ಸಿದ್ಧಾಪುರ ಅಲ್ಲಿನ ಲತಿಕಾ ಗಣಪತಿ ಭಟ್ಟ ಇವರನ್ನು ಪ್ರಶಸ್ತಿಗೆ ಆಯ್ಕೆಗೊಳಿಸಿದೆ.
ಇದೇ ಬರುವ ಮಾ. 10ನೇ ಭಾನುವಾರ (ಶೋಭ ಕೃತನಾಮ ಸಂವತ್ಸರ ಮಾಘ ಮಾಸ ಬಹುಳ ಅಮವಾಸ್ಯೆ) ಅಪರಾಹ್ನ 3.30 ಗಂಟೆಗೆ ಶಿರಸಿ ಸಿದ್ಧಾಪುರ ಅಲ್ಲಿನ ಅಭಿಮನೆ `ಸುಯೋಗಾಶ್ರಯ' ಹಿರಿಯರ ಮನೆ ಇಲ್ಲಿ ಪ್ರಶಸ್ತಿ ಪ್ರದಾನ ನಡೆಸಲಾಗುವುದು ಎಂದು ಮಯೂರವರ್ಮ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ವಿಶ್ವನಾಥ ದೊಡ್ಡನೆ ತಿಳಿಸಿದ್ದಾರೆ.
ಹೊನ್ನಾವರ ಇಲ್ಲಿನ ನಾಗರಿಕ ವಾರಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ ಕರ್ಕಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಅತಿಥಿü ಅಭ್ಯಾಗತರಾಗಿ ಶಿರಸಿ ಅಲ್ಲಿನ ಪತ್ರಕರ್ತ ಅಶೋಕ ಹಾಸ್ಯಗಾರ ಕವಿಯಿತ್ರಿ ಸಿಂಧೂ ಚಂದ್ರ ಹೆಗಡೆ ಶಿರಸಿ ಆಗಮಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕು| ಪ್ರಿಯಾಂಕಾ ಪರಮಾನಂದ ಹೆಗಡೆ ಶಿರಸಿ ಅವರು ಕೀರ್ತನೆ ನಡೆಸಲಿದ್ದಾರೆ.
ವಾರ್ಷಿಕ `ಚೆನ್ನಭೈರಾದೇವಿ' ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮದಲ್ಲಿ ನಾಡಿನ ಸಾಹಿತಾಸಕ್ತರು ಭಾಗವಹಿಸುವಂತೆ ಮಯೂರವರ್ಮ ಪ್ರತಿಷ್ಠಾನದ ಅಧ್ಯಕ್ಷ ಕಡಂದಲೆ ಸುರೇಶ ಭಂಡಾರಿ, ಉಪಾಧ್ಯಕ್ಷ ರಾಜೇಶ ಪಿ.ಗೌಡ ಸಿಂಧೂರ, ಗೌರವ ಕಾರ್ಯದರ್ಶಿ ವಿಶ್ವನಾಥ ದೊಡ್ಡನೆ, ಸಂಚಾಲಕರಾದ ಜಯಪ್ರಕಾಶ ಹಣ್ಣು, ಕೇಶವ ಕಿಚ್ಚೆ ತಿಳಿಸಿದ್ದಾರೆ.