ಮಂಗಳೂರು: ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮಹತ್ತರವಾದ ಜವಾಬ್ದಾರಿ ಮಂಗಳೂರು ಮಹಾನಗರ ಪಾಲಿಕೆ ಮೇಲಿದೆ. ಇಂತಹ ಸಂಧರ್ಭದಲ್ಲಿ ಜನರ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಜನರಿಗೆ ಹೆಚ್ಚಿನ ಹೊರೆ ಆಗದಂತೆ ತೆರಿಗೆ ವಿಧಿಸಬೇಕಾದ ಜವಾಬ್ದಾರಿ ಆಡಳಿತ ಮಾಡುವ ಪಕ್ಷದ ಮೇಲಿರುತ್ತದೆ. ‘ಸಬ್ ಕಾ ಸಾತ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಎಂಬ ಮಾತನ್ನು ಹೇಳುತ್ತಾ ಉತ್ತಮ ಆಡಳಿತವನ್ನು ಕೊಡುತ್ತೇವೆ ಎಂದು ಚುನಾವಣೆಯ ಸಂಧರ್ಭದಲ್ಲಿ ಹೇಳಿದ ಮೇರೆಗೆ ಮಂಗಳೂರು ಮಹಾನಗರ ಪಾಲಿಕೆಯ ಮತದಾರರು 2019 ರಲ್ಲಿ ಅಧಿಕಾರವನ್ನು ಬಿಜೆಪಿ ಕೈಗೆ ಕೊಟ್ಟಿತು.
2. ಮ.ನ.ಪಾ ದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಸಂಧರ್ಭಧಲ್ಲಿ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿ.ಜೆ.ಪಿ ಸರಕಾರ ಇತ್ತು ಎಂಬುವುದು ಉಲ್ಲೇಖನೀಯ. ಡಬಲ್ ಇಂಜಿನ್ ಸರಕಾರ ಇದ್ದಲ್ಲಿ ಉತ್ತಮ ಆಡಳಿತ ಮತ್ತು ಅಭಿವೃದ್ದಿ ಮಾಡಲು ಸಾಧ್ಯ ಎಂದು ಬಿ.ಜೆ.ಪಿ ಯವರು ಹೇಳುತ್ತಾ ಬಂದಿದ್ದಾರೆ. ಅದರಂತೆ ಮ.ನ.ಪಾ ದಲ್ಲಿ ಕೂಡ ಬಿ.ಜೆ.ಪಿ ಆಡಳಿತ ಬಂದಾಗ ಬಿ.ಜೆ.ಪಿ ಹೇಳುವಂತೆ ತ್ರಿಪಲ್ ಇಂಜಿನ್ ಸರಕಾರ ಆಡಳಿತಕ್ಕೆ ಬಂತು. ಆದರೆ ಚುನಾವಣೆಯ ಸಂಧರ್ಭದಲ್ಲಿ ಏನು ಅವರ ಧ್ಯೇಯ ವಾಕ್ಯವಿತ್ತು ಅದಕ್ಕೆ ವಿರುದ್ಧವಾದ ನಡೆಯನ್ನು ನಾವು ಕಂಡಿದ್ದೇವೆ.
3. 18.02.2021 ರಂತೆ ಬಿ.ಜೆ.ಪಿ ನೇತೃತ್ವದ ಕೇಂದ್ರ ಸರಕಾರದ ನಿರ್ಧೇಶನದಂತೆ ಬಿ.ಜೆ.ಪಿ ನೇತೃತ್ವದ ಕರ್ನಾಟಕ ರಾಜ್ಯ ಸರಕಾರ ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಕಾಯಿದೆಗೆ ತಿದ್ದುಪಡಿ ತರುವುದರ ಮೂಲಕ ಸ್ವಯಂಘೋಷಿತ ಆಸ್ತಿ ತೆರಿಗೆಯನ್ನು ಪರಿಷ್ಕ್ರತ ಲ್ಯಾಂಡ್ ಗೈಡೆನ್ಸ್ ವ್ಯಾಲ್ಯೂ ಆಧಾರದಲ್ಲಿ ವಸೂಲಿ ಮಾಡಬೇಕೆಂದು ಹೇಳಿದ್ದು, ಅದರಂತೆ ಮನೆಯ ಅಂಗಳಕ್ಕೆ ಕೂಡ ತೆರಿಗೆ ಹಾಕಿದ ಪ್ರಯುಕ್ತ ಮಂಗಳೂರು ಮಹಾನಗರ ಪಾಲಿಕೆಯ ನಾಗರಿಕರಿಗೆ ಹೆಚ್ಚಿನ ಹೊರೆಯನ್ನು ಹಾಕಲಾಗಿದೆ. ಈ ನೂತನ ತಿದ್ದುಪಡಿಯಾದ ಕಲಂ ನಂತೆ ಈ ಹಿಂದೆ ಇದ್ದ ದರಕ್ಕಿಂತ ಐದರಿಂದ ಆರು ಪಟ್ಟು ಹೆಚ್ಚುವರಿ ತೆರಿಗೆ ಕಟ್ಟಬೇಕಾದಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಬೊಮ್ಮಾಯಿ ನೇತೃತ್ವದ ಬಿ.ಜೆ.ಪಿ ಸರಕಾರ 19.02.2021 ಕ್ಕೆ ಕಳುಹಿಸಿದ ಸುತ್ತೋಲೆಯಂತೆ ಸ್ವಯಂಘೋಷಿತ ಆಸ್ತಿ ತೆರಿಗೆಯನ್ನು ಹೆಚ್ಚು ಮಾಡಲು ಕೇಂದ್ರ ಸರಕಾರದ ನಿರ್ಧೇಶನ ಇದೆ ಎನ್ನುವಂತಹ ಉಲ್ಲೇಖವನ್ನು ಮಾಡಿದೆ ಎಂಬುವುದು ಇಲ್ಲಿ ಪ್ರಸ್ತುತ.
4. ಮ.ನ.ಪಾ ದಲ್ಲಿ ಪ್ರೇಮಾನಂದ ಶೆಟ್ಟಿ ಮೇಯರಾಗಿದ್ದುಕೊಂಡು ಅಕ್ಷಯ ಶೀಧರ್ ಆಯುಕ್ತರಾಗಿದ್ದ ಸಂಧರ್ಭ ಮ.ನ.ಪಾ ಪರಿಷತ್ತು ಸಭೆಯಲ್ಲಿ ಕಾಯಿದೆ ತಿದ್ದುಪಡಿ ಪ್ರಕಾರ ಪರಿಷ್ಕ್ರತ ಸ್ವಯಂಘೋಷಿತ ಆಸ್ತಿ ತೆರಿಗೆ ಹಾಕುವ ಸಂಧರ್ಭದಲ್ಲಿ ವಿವೇಚನೆಯಿಂದ ಹಾಕದಿದ್ದಲ್ಲಿ ಜನರಿಗೆ ಹೆಚ್ಚುವರಿ ಹೊರೆ ಬೀಳಲಿದೆ ಎಂಬ ವಿಚಾರವನ್ನು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಪರಿಷತ್ತಿನ ಗಮನ ಸೆಳೆಯುವ ಗಂಭೀರ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದ್ದು, ಆ ಸಂಧರ್ಭದಲ್ಲಿ ಮ.ನ.ಪಾ ಬಿ.ಜೆ.ಪಿ ಆಡಳಿತ ಯಾವುದೇ ಕ್ರಮ ವಹಿಸಿಲ್ಲ ಎಂಬುವುದು ಉಲ್ಲೇಖನೀಯ. ಕಾರಣ,
ಆ ಸಂಧರ್ಭದಲ್ಲಿ ರಾಜ್ಯದಲ್ಲಿ ಅವರದೇ ಪಕ್ಷ ಅಧಿಕಾರ ನಡೆಸುತ್ತಿತ್ತು ಎಂಬುವುದು ಉಲ್ಲೇಖನೀಯ.
5. ರಾಜ್ಯದಲ್ಲಿ ಮತ್ತು ಮ.ನ.ಪಾದಲ್ಲಿ ಕಾಂಗ್ರೆಸ್ ಆಡಳಿತ ಇದ್ದಂತಹ ಸಂಧರ್ಭದಲ್ಲಿ ಕೇವಲ ಮನೆ/ವಾಸ್ತವ್ಯದ ಕಟ್ಟಡ, ವಾಣಿಜ್ಯ/ವಾಣಿಜ್ಯೇತರ ಕಟ್ಟಡಕ್ಕೆ ಮತ್ತು ಪರಿವರ್ತಿತ ಖಾಲಿ ಭೂಮಿಗೆ ಮಾತ್ರ ಸ್ವಯಂಘೋಷಿತ ಆಸ್ತಿ ತೆರಿಗೆ 2008-09 ರ ಲ್ಯಾಂಡ್ ಗೈಡ್ ಲೈನ್ ವ್ಯಾಲ್ಯೂ ಪ್ರಕಾರ ವಿಧಿಸಲಾಗುತ್ತಿತ್ತು. ಅಂಗಳಕ್ಕೆ ತೆರಿಗೆ ವಿಧಿಸುತ್ತಿರಲಿಲ್ಲ ಎಂಬುವುದು ಉಲ್ಲೇಖನೀಯ.
6. ಮ.ನ.ಪಾ ದಲ್ಲಿ ಕಾಂಗ್ರೆಸ್ ಆಡಳಿತ ಇದ್ದಂತಹ ಸಂಧರ್ಭದಲ್ಲಿ ಜನರಿಗೆ 24 ಸಾವಿರ ಲೀಟರ್ ನೀರನ್ನು ಕೇವಲ `65/- ಕ್ಕೆ ನೀಡುತ್ತಿತ್ತು. ಆದರೆ 2019 ರಲ್ಲಿ ಬಿ.ಜೆ.ಪಿ ನೇತೃತ್ವದ ರಾಜ್ಯ ಸರಕಾರ 24 ಸಾವಿರ ಲೀಟರ್ ನಿಂದ 8 ಸಾವಿರ ಲೀಟರ್ ಕಡಿತ ಮಾಡಿತ್ತು, ಅಂದರೆ ಸುಮಾರು 16 ಸಾವಿರ ಲೀಟರ್ ನೀರಿನ ಕಡಿತಮಾಡಿತ್ತು. ಆ ದರದಂತೆ 24 ಸಾವಿರ ಲೀಟರ್ ನೀರು ಉಪಯೋಗಮಾಡಬೇಕಾದಲ್ಲಿ ಜನರು `168/- ಪಾವತಿ ಮಾಡಬೇಕಾಗುತ್ತದೆ. ಅಂದರೆ `102/- ಹೆಚ್ಚಳ ಮಾಡಿತ್ತು. ಆ ಸಂಧರ್ಭದಲ್ಲಿ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಡಬಲ್ ಇಂಜಿನ್ ಸರಕಾರ ಇದ್ದರೂ ಮ.ನ.ಪಾ ಬಿಜೆ.ಪಿ ಆಡಳಿತ ಬಿಲ್ಲನ್ನು ಕಡಿಮೆ ಮಾಡಿಸಲು ಯಾವುದೇ ಪ್ರಯತ್ನ ಪಟ್ಟಿಲ್ಲ. 2023 ರ ವಿಧಾನಸಭೆ ಚುನಾವಣೆಯ ಸಂಧರ್ಭದಲ್ಲಿ ಮತ ಕೇಳಲು ಹೋಗುವ ಸಂಧರ್ಭದಲ್ಲಿ ಜನರ ಆಕ್ರೋಷವನ್ನು ಎದುರಿಸಬೇಕಾಗುತ್ತದೆ ಎಂಬ ಕಾರಣದಿಂದ ಕೇವಲ ಒಂದು ವರುಷದ ಮಟ್ಟಿಗೆ ಹಳೆಯ ದರದ ಪ್ರಕಾರ ನೀರಿನ ಬಿಲ್ಲನ್ನು ನೀಡಿ ಚುನಾವಣೆಯ ನಂತರ ಪುನಃ ಏರಿಕೆ ಮಾಡಿದ ದರದಂತೆ ನೀರಿನ ಬಿಲ್ಲನ್ನು ಹಾಕಿದೆ. ಇದು ಬಿ.ಜೆ.ಪಿ ಯ ಇಬ್ಬಗೆ ನೀತಿಯನ್ನು ಸಾಬೀತು ಪಡಿಸುತ್ತದೆ.
7. ಅದೇ ರೀತಿ 25.02.2021 ರಿಂದ ಮನೆ ಕಟ್ಟಡ ಪರವಾನಗಿ ಶುಲ್ಕವನ್ನು ಚದರ ಮೀಟರ್ ಗೆ ಮೂರು ಪಟ್ಟು (`4/- ರಿಂದ `12/-) ಹೆಚ್ಚಿಸಲಾಗಿದೆ. ಮಾತ್ರವಲ್ಲದೇ, ನೀರು ಸರಬರಾಜು ಶುಲ್ಕ ಹೆಚ್ಚುವರಿಯಾಗಿ ಅದರೊಂದಿಗೆ ಪಾವತಿಮಾಡಬೇಕಾಗಿದೆ.
8. ಬಿ.ಜೆ.ಪಿ ಸರಕಾರ ರಾಜ್ಯದಲ್ಲಿ ಆಡಳಿತ ಇರುವಂತಹ ಸಂಧರ್ಭದಲ್ಲಿ ಜನರ ಮೇಲೆ ಹೆಚ್ಚಿನ ಹೊರೆ ಹಾಕಲಾಗಿರುತ್ತದೆ. ಆ ಸಂಧರ್ಭದಲ್ಲಿ ಮೌನ ವಹಿಸಿದ ಮ.ನ.ಪಾ ಬಿ.ಜೆ.ಪಿ ಆಡಳಿತ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಅವರದೇ ಬಿ.ಜೆ.ಪಿ ಸರಕಾರ ತಂದ ಕಾನೂನಿನ ಮತ್ತು ನಿರ್ಣಯದ ವಿರುದ್ಧವಾಗಿ ಮ.ನ.ಪಾದಲ್ಲಿ ನಿರ್ಣಯ ಮಂಡಿಸಿ ರಾಜ್ಯಕ್ಕೆ ಕಳುಹಿಸುವಂತದ್ದು ಬಿಜೆಪಿ ಇಬ್ಬಗೆ ನೀತಿಯನ್ನು ತೋರ್ಪಡಿಸುತ್ತದೆ.
ಸುದ್ದಿಗೋಷ್ಠಿಯಲ್ಲಿ ಮ.ನ.ಪಾ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಸದಸ್ಯರಾದ ಲ್ಯಾನ್ಸಿ ಲೋಟೊ ಪಿಂಟೊ, ರವೂಫ್ ಬಜಾಲ್, ನವೀನ್ ಡಿಸೋಜ, ಎ.ಸಿ.ವಿನಯರಾಜ್, ಕೇಶವ ಮರೋಳಿ, ಸಂಶುದ್ದೀನ್ ಕುದ್ರೋಳಿ, ಅನಿಲ್ ಕುಮಾರ್, ಝೀನತ್ ಸಂಶುದ್ದೀನ್ ಬಂದರ್ ಉಪಸ್ಥಿತರಿದ್ದರು.