ಕುಂದಾಪುರದ ಹಿರಿಯ ಮಹಿಳೆಯೊಬ್ಬರು ವಿದ್ಯುತ್ ಕೈಕೊಟ್ಟಾಗ ಮೇಣದ ಬತ್ತಿ ಬಳಸಲು ಹೋಗಿ ಅದು ಅವರ ಜೀವವನ್ನೇ ಬಲಿ ಪಡೆದಿದೆ.

ಮೇಣದ ಬತ್ತಿಯಿಂದ ಕೊಲೆಯಾದ ಮಹಿಳೆ 76ರ ಮೋಂತಿ ಪಿರೇರಾ. ಶನಿವಾರ ರಾತ್ರಿ ಊಟ ಮಾಡುವಾಗ ಮಿಂಚುರಿ ಹೋಗಿದೆ. ಆಗ ಅವರು ಹಚ್ಚಿದ ಮೇಣದ ಬತ್ತಿ ತಪ್ಪಿ ನೈಟಿಗೆ ಬೆಂಕಿ ಹತ್ತಿಕೊಂಡಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅವರನ್ನು ಉಡುಪಿ ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೆ ತರಲಾಗಿತ್ತು. ಚಿಕಿತ್ಸೆ ಫಲಿಸದೆ ಅವರು ಭಾನುವಾರ ಸಾವಿಗೆ ಶರಣಾದರು.