ಮಂಗಳೂರು:  ದೇವಂದಗುಡ್ಡೆ ಮರಕಡ ಗ್ರಾಮ ಇತಿಹಾಸ ಪ್ರಸಿದ್ದ ಮಹಾತೋಭಾರ ಶ್ರೀ ಸೋಮನಾಥೇಶ್ವರ ಮಹಿಷಮರ್ದಿನಿ ದೇವಸ್ಥಾನ ಸುಮಾರು 1300 ಇತಿಹಾಸ ಇರುವ ಪುರಾತನ ಕಾಲದ ದೇವಸ್ಥಾನವಾಗಿದ್ದು ಈ ದೇವಸ್ಥಾನದ ಜೀಣೋದ್ದಾರ ಕಾರ್ಯ ಸುಮಾರು10ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. ಈ ದೇವಸ್ಥಾನಕ್ಕೆ  ವಿಧಾನಪರಿಷತ್ ಶಾಸಕರಾದ ಐವನ್ ಡಿʼಸೋಜಾ ಭೇಟಿ  ನೀಡಿ, ಜೀರ್ಣೋದ್ದಾರ ಕಾಮಗಾರಿಯನ್ನು ಪರಿಶೀಲಿಸಿದರು ಹಾಗೂ ಈ ಸಂದರ್ಭದಲ್ಲಿ ತಮ್ಮ ಪ್ರದೇಶಾಭಿವೃದ್ದಿ ನಿಧಿಯಿಂದ ಅನುದಾನ ಕೊಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಕಾರ್ಯದರ್ಶಿ ಭಾಗ್ಯೋದಯ ಶೆಟ್ಟಿ, ವಿಜಯಕುಮಾರ್ ಶೆಟ್ಟಿ ಮಾಜಿ ಮೇಯರ್ ಹರಿನಾಥ್ ಮರಕಡ ವಲಯ ಅಧ್ಯಕ್ಷರಾದ ಜಿ.ಕೆ. ಶ್ರೀನಿವಾಸ್ ಸಾಲ್ಯಾನ್ ಮುಂತಾದವರು ಜೊತೆಗಿದ್ದರು.