ಮುಂಬಯಿ: ಕೊಂಕಣಿ ಕನ್ನಡ ಹಾಸ್ಯ ರಂಗ ನಟ ಮತ್ತು ಕಾರ್ಯಕ್ರಮದ ಸಮನ್ವಯಕರು ಶ್ರೀ ಕೈವಲ್ಯ ಮಠಾಧಿಪತಿ ಶ್ರೀಮದ ಶಿವಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ದಾದರ (ಪೂರ್ವ)ದ, ಹಿಂದೂ ಕಾಲೋನಿಯ ರಾಜಾ ಶಿವಾಜಿ ವಿದ್ಯಾಲಯ ಸಂಕುಲ, ಪ್ರಾಚಾರ್ಯ ಬಿ ಎನ್ ವೈದ್ಯ ಸಭಾಗ್ರಹದಲ್ಲಿ ,ಆಮ್ಮಿ ರಂಗಕರ್ಮಿ, ಆಯೋಜಿತ 'ಧರ್ಮ ಸಭೆ ' ಹಾಗೂ ಕೊಂಕಣಿ ನಾಟಕ 'ನಂದಾದೀಪ' ಪ್ರದರ್ಶನ ಸ್ವಾರಸ್ಯಮಯ ಶ್ರೇಷ್ಠ ಕೊಂಕಣಿ ನಾಟಕ ಪ್ರದರ್ಶನದ ಮೂಲಕ ಮುಂಬೈ , ಮಹಾರಾಷ್ಟ್ರ, ಕರ್ನಾಟಕ, ಗೋವಾದ ಪ್ರೇಕ್ಷಕರಿಗೆ, ರಂಗಭೂಮಿಯ ರಸದ ಸವಿಯನ್ನು ಆಗಾಗ್ಗೆ ಉಣಿಸುತ್ತಿರುವ ಆಮ್ಮಿ ರಂಗಕರ್ಮಿ (ರಿ), ಮುಂಬೈ ಕಳೆದ ಹಲವು ವರ್ಷಗಳಿಂದ ಮುಂಬೈ ಮಹಾನಗರ, ಉಪನಗರ, ಕರಾವಳಿ ಕರ್ನಾಟಕ, ಉತ್ತರ ಕರ್ನಾಟಕ, ಹಾಗೂ ಬೆಂಗಳೂರು , ಮೈಸೂರು, ಇನ್ನಿತರೆ ಊರಿನಲ್ಲಿ ಜಯಭೇರಿ ಗಳಿಸುತ್ತಿರುವ ರೂವಾರಿ ಡಾ। ಚಂದ್ರಶೇಖರ ಶೆಣೈ ತಮ್ಮ ಆಮ್ಮಿ ರಂಗಕರ್ಮಿ ಸಂಸ್ಥೆ ಮುಖಾಂತರ Indian Education Society, ಹಿಂದು ಕಾಲೋನಿ, ದಾದರ , ರಾಜಾ ಶಿವಾಜಿ ವಿದ್ಯಾಲಯ ಸಂಕಿರಣದ, ಬಿ ಎನ್ ವೈದ್ಯ ಸಭಾಗ್ರಹದಲ್ಲಿ, ಒಂದು ವಿಶೇಷ ಧರ್ಮ ಸಭೆಯನ್ನು ಇದೇ ಬರುವ ಶನಿವಾರ, ಅಕ್ಟೋಬರ್ 4, 2025 ರಂದು ಸಂಜೆ 4 ಘಂಟೆಗೆ ಆಯೋಜಿಸಿದ್ದಾರೆ. IES ವಿಶ್ವಸ್ಥ ರಾದ ಸತೀಶ ಲೊಟ್ಲಿಕರ ( Academician ) ಹಾಗೂ ಸತೀಶ ರಾಮಾ ನಾಯಕ (ವಿಶ್ವಸ್ಥ) Academician & ಉದ್ಯಮಿ ಇವರ ಅಮೂಲ್ಯ ಸೌಜನ್ಯದ ಮೇರೆಗೆ ಈ ಧರ್ಮ ಸಭೆ ನೆರವೇರಿಸಲಾಗುತ್ತಿದೆ.
ಪರಮ ಪೂಜ್ಯ ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾದೀಶ ಶ್ರೀಮದ ಶಿವಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಆಗಮನ, ಮತ್ತು ಉಪಸ್ಥಿತಿಯಲ್ಲಿ ಈ ಅಮೋಘ ಧರ್ಮ ಸಭೆಯು ನೆರವೇರಿಸಲಾಗುವುದು. ಈ ದಿನ ಸ್ವಾಮಿಜಿಯವರಿಗೆ ಪೂರ್ಣ ಕುಂಭ ಸ್ವಾಗತ ಕೋರಿ ಬರಮಾಡಿ ಕೊಳ್ಳಲಾಗುವುದು.
ಆಮ್ಮಿ ರಂಗಕರ್ಮಿ (ರಿ), ಮುಂಬೈ ಸಂಚಾಲಕತ್ವದಲ್ಲಿ ಆಗಮಿಸಿರುವ ಗಣ್ಯರ, ಕಲಾವಿದರ , ಕಲಾ ಸಂಘಟಕರ, ಸಂಘ ಸಂಸ್ಟೆಗಳ ಮುಖ್ಯಸ್ಥರ, ಉದ್ಯಮಿಗಳ, ದಾನಿಗಳ ಸಮಕ್ಷ ಸ್ವಾಮೀಜಿಯವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿರವರು. ನೆರೆದ ಸಮಾಜ ಬಾಂಧವರನ್ನು ಉದ್ದೇಶಿಸಿ ಸಮಾಜ ಹಾಗೂ ಕಲಾಭಿಮಾನಿ ಪ್ರೇಕ್ಷಕರಿಗೆ ಆಶೀರ್ವಚನ ನೀಡಲಿದ್ದಾರೆ.
ಈ ಶುಭ ಸಂದರ್ಭದಲ್ಲಿ ಮುಂಬೈ ಸಾಂಸ್ಕೃತಿಕ, ಔದ್ಯೋಗಿಕ, ಕಲಾ ಜಗತ್ತಿನಲ್ಲಿ ಮೆರೆದ ಗಣ್ಯರಿಗೆ ಕೈವಲ್ಯ ಶ್ರೀ ಗಳ ಸುಹಸ್ತ ಗಳಿಂದ ಸನ್ಮಾನಿಸಲಾಗುವುದು.
ಡಾ। ಚಂದ್ರಶೇಖರ ಶೆಣೈರಿಂದ ಅನುವಾದಗೊಂಡಿರುವ ಮೂಲ ಮರಠಿ ನಾಟಕ 'ದಿವಾ ಜಳುದೆ ಸಾರಿ ರಾತ '( ಮಧುಸೂದನ್ ಕಾಲೆಲ್ಕರ ಲಿಖಿತ) ಕೊಂಕಣಿ ' ನಂದಾದೀಪ ' ನಾಟಕವನ್ನು ಆಮ್ಮಿ ರಂಗಕರ್ಮಿ ಮತ್ತು ಗುರುಕೃಪಾ ಕಲಾರಂಗ, ದಹಿಸರ ಕಲಾವಿದರು ಪ್ರಸ್ತುತ ಪಡಿಸಲಿರುವರು.
ಈ ಸಮಾರಂಭಕ್ಕೆ/ ನಾಟಕಕ್ಕೆ ಸರ್ವ ಕೊಂಕಣಿ ಬಂಧು ಬಾಂಧವರಿಗೆ ಉಚಿತ ಪ್ರವೇಶವನ್ನು ಕೋರಲಾಗಿದೆ.
ಅಂತೆಯೇ, ಅಧಿಕ ಸಂಖ್ಯೆಯಲ್ಲಿ ರಸಿಕ ಪ್ರೇಕ್ಷಕರು, ಕೊಂಕಣಿ, ಕನ್ನಡ ಸಮಾಜ ಬಾಂಧವರು ಉಪಸ್ಥಿತರಿದ್ದು, ಗುರುಗಳ ದಿವ್ಯ ಅನುಗ್ರಹ, ಆಶೀರ್ವಾದ ಪಡೆದು, ನಾಟಕವನ್ನು ವೀಕ್ಷಿಸಿ ಆನಂದ ಪಡೆಯ ಬೇಕೆಂದು ಆಮ್ಮಿ ರಂಗಕರ್ಮಿ ( ರಿ ), ಮುಂಬೈ ಅಧ್ಯಕ್ಷ ಡಾ। ಚಂದ್ರಶೇಖರ ಶೆಣೈ ಹಾಗೂ ಸಮನ್ವಯಕ ಕಲಾವಿದರಾದ ಕಮಲಾಕ್ಷ ಸರಾಫರು ವಿನಂತಿಸಿಕೊಂಡಿದ್ದಾರೆ .