ಕಾರ್ಕಳ: ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಸಮಾಜಸೇವಾ ಕಾರ್ಯಕ್ರಮದ ಅಂಗವಾಗಿ ಬ್ರೆಸ್ಟ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕವಿತಾ ನಾಯಕ್ ಅವರಿಗೆ ಆರ್ಥಿಕ ನೆರವಿನ ರೂಪದಲ್ಲಿ ಚಕ್ಕನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ರಾದ ಕೆ. ನವೀನ್ ಚಂದ್ರ ಶೆಟ್ಟಿ ನೆರವು ಹಸ್ತಾಂತರಿಸಿ ಮಾತನಾಡಿ, “ರೋಟರಿ ಸದಾ Service Above Self ತತ್ವವನ್ನು ಪಾಲಿಸುತ್ತಿದೆ. ಆರೋಗ್ಯದ ಹಾದಿಯಲ್ಲಿ ಹೋರಾಡುತ್ತಿರುವ ರೋಗಿಗಳಿಗೆ ನೆರವು ನೀಡುವುದು ನಮ್ಮ ಸಾಮಾಜಿಕ ಜವಾಬ್ದಾರಿ” ಎಂದರು.
ಈ ಸಂದರ್ಭದಲ್ಲಿ ಕ್ಲಬ್‌ನ ಕಾರ್ಯದರ್ಶಿ ಚೇತನ್ ನಾಯಕ್ , ಹರ್ಷಿಣಿ ವಿಜಯರಾಜ್,ಸುರೇಶ್ ನಾಯಕ್, ವಸಂತ್ ಎಂ, ಶೇಖರ್ ಎಚ್, ಬಾಲಕೃಷ್ಣ ದೇವಾಡಿಗ, ಶ್ರೀಶ ಭಟ್, ಚೇತನ್ ಕುಮಾರ್ ಹಾಜರಿದ್ದರು.