ಮಂಗಳೂರು: ಕೊಂಚಾಡಿಯ ಮಂದಾರಬೈಲ್ ಶ್ರೀ ದುರ್ಗಾಪರಮೇಶ್ವರೀ ವೆಂಕಟರಮಣ ದೇವಸ್ಥಾನದಲ್ಲಿ ಮುಂಬರುವ ಫೆಬ್ರವರಿ 11 ರಂದು ಲೋಕಕಲ್ಯಾಣಾರ್ಥವಾಗಿ ನಡೆಯಲಿರುವ ಶ್ರೀನಿವಾಸ ಕಲ್ಯಾಣೋತ್ಸವದ ಪೂರ್ವಭಾವಿ ಕಾರ್ಯಕ್ರಮಗಳ ಪ್ರಯುಕ್ತ ವಿವಿಧ ಭಜನಾ ಮಂಡಳಿಯವರ ಸಹಭಾಗಿತ್ವದಲ್ಲಿ 48 ದಿನ ನಡೆಯಲಿರುವ ನಿತ್ಯ ಭಜನಾ ನಾದೋಪಾಸನಾ ಸರಣಿಯ ಉದ್ಘಾಟನೆಯು ದಿನಾಂಕ 22ನೇ ಡಿಸೆಂಬರ್ ಗುರುವಾರದಂದು ಸಂಜೆ 5.30ಕ್ಕೆ ನೆರೆವೇರಿತು.
ಕದ್ರಿ ಮಂಜುನಾಥ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಮೂ. ಕೃಷ್ಣ ಅಡಿಗ ಅವರು ನಾದೋಪಸನಾ ಸರಣಿಯನ್ನು ಉದ್ಘಾಟಿಸಿದರು. ಉದ್ಯಮಿ ವಾಸುದೇವ ಭಟ್ ಕೆ, ಕೆಪಿಟಿ ನಿವೃತ್ತ ರಿಜಿಸ್ಟ್ರಾರ್ ರಾಜೇಂದ್ರ ಪ್ರಸಾದ್ ಎಕ್ಕಾರು, ಮಥುರಾ ಅಪಾರ್ಟ್ಮೆಂಟ್ ಕೊಂಚಾಡಿ ಇದರ ಅಧ್ಯಕ್ಷ ಅವನೀಶ್ ಭಟ್, ದುರ್ಗಾಪರಮೇಶ್ವರಿ ವೆಂಕಟರಮಣ ದೇವಸ್ಥಾನ ಮಂದಾರಬೈಲು ಇದರ ಅರ್ಚಕರಾದ ರಂಗನಾಥ್ ಭಟ್, ಕರ್ನಾಟಕ ಜೋಗಿ ಮಹಿಳಾ ಘಟಕದ ಅಧ್ಯಕ್ಷೆ ಅಮಿತಾ, ಶ್ರೀನಿವಾಸ ಕಲ್ಯಾಣೋತ್ಸವ ಸೇವಾ ಸಮಿತಿ ಅಧ್ಯಕ್ಷ ದುರ್ಗಾದಾಸ್ ಇರ್ವತ್ತಾಯ, ಶ್ರೀ ದುರ್ಗಾಪರಮೇಶ್ವರಿ ವೆಂಕಟರಮಣ ದೇವಸ್ಥಾನ, ಮಂದಾರಬೈಲು ಇದರ ಅಧ್ಯಕ್ಷ ಲಕ್ಷ್ಮಣ ದೇವಾಡಿಗ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರಸನ್ನ ರಾವ್, ಗೋಪಾಲಕೃಷ್ಣ ಭಟ್, ಹಿಮಕರ್ ರಾವ್, ಜ್ಯೋತಿ ಪ್ರವೀಣ್ , ಪ್ರಕಾಶ್ ಕುಮಾರ್, ವೆಂಕಟರಮಣ ಶೆಟ್ಟಿಗಾರ್, ದೂಮಪ್ಪ ಮೂಲ್ಯ, ಮಧುಸೂದನ ಅಲೆವೂರಾಯ ಮತ್ತು ಸಮಿತಿಯ ಸದಸ್ಯರು, ಕಾರ್ಯಕರ್ತರು ಹಾಗೂ ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಲ್ಯಾಣೋತ್ಸವ ಸಮಿತಿಯ ಗುರು ಪ್ರಸಾದ್ ಕಡಂಬಾರ್ ಕಾರ್ಯಕ್ರಮ ನಿರೂಪಿಸಿದರು.