ವರದಿ ರಾಯಿ ರಾಜಕುಮಾರ ಮೂಡುಬಿದಿರೆ 


ಮೂಡುಬಿದಿರೆಯ ಸುಧಾ ಜ್ಯುವೆಲ್ಲರ್ಸ್ ನ ಮಾಲೀಕ , ನಗುಮುಖದ ಉದ್ಯಮಿ ಎಂ ಶ್ರೀಧರ ಆಚಾರ್ಯ 84ನೇ ವಯಸ್ಸಿನಲ್ಲಿ ದೈವಾಧೀನರಾಗಿರುತ್ತಾರೆ. ಲಕ್ಷ್ಮಿ ಜ್ಯುವೆಲ್ಲರ್ಸ್, ಹನ್ಸಿ ಗೋಲ್ಡ್ ಮತ್ತು ಡೈಮಂಡ್, ಸುಧಾತ್ರಿ ಜ್ಯುವೆಲ್ಲರ್ಸ್ ಗಳ ಮಾಲಿಕರ ತಂದೆಯವರಾದ ಇವರು ತಮ್ಮ ಮಾವ ರಾಮರಾಯ ಆಚಾರ್ಯರಲ್ಲಿ ಚಿನ್ನದ ಉದ್ಯಮದ ಎಲ್ಲವನ್ನು ಕಲಿತು ಸುಮಾರು ಐದು ದಶಕಗಳ ಕಾಲ ಯಶಸ್ವಿ ಉದ್ಯಮಿಯಾಗಿ ಹೆಸರುಗಳಿಸಿದವರು. ಕೊನೆಯವರೆಗೂ ಅಂಗಡಿಯಲ್ಲಿ ಕುಳಿತು ಉದ್ಯಮವನ್ನು ಮಾಡಿ ಜನರ ಮೆಚ್ಚುಗೆಯನ್ನು ಗಳಿಸಿದ್ದನ್ನು ನೆನಪಿಸಿಕೊಳ್ಳುತ್ತಾರೆ.