ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ: ವಾಲ್ಪಾಡಿ ಪಂಚಾಯತ್ ಗ್ರಾಮ ಸಭೆ ಆಗಸ್ಟ್ 13 ರಂದು ನಡೆಯಿತು. ಸದಸ್ಯ ಪ್ರದೀಪ್ ಕುಮಾರ್ ರವರು ಪ್ರಶ್ನೆಗೆ ಉತ್ತರಿಸಿ ಅಳಿಯೂರು ಶಾಲಾ ಸ್ವಚ್ಛತೆ ಸರಿಪಡಿಸಲು ಆರೋಗ್ಯ ಇಲಾಖೆಯ ತಪಾಸಣೆ ಅಗತ್ಯ. ತಾಲೂಕಿನಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ್ದರೂ ಕೂಡ ಖಾಯಂ ಶಿಕ್ಷಕರ ಕೊರತೆ ಅನುಭವಿಸುತ್ತಿದೆ ಇದನ್ನು ಶಿಕ್ಷಣ ಇಲಾಖೆ ಸರಿಪಡಿಸಬೇಕೆಂದು ಮಾರ್ಗದರ್ಶಿ ಅಧಿಕಾರಿಯಾಗಿ ಹಾಜರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ರಾಜೇಶ್ ಭಟ್ ಅವರಲ್ಲಿ ಕೇಳಿಕೊಂಡರು. ಕಲೆ, ಸಂಗೀತ, ಶಾರೀರಿಕ ಶಿಕ್ಷಣ ಇತ್ಯಾದಿಯಲ್ಲಿ ನುರಿತ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಇದೆ ಎಂದು ಮಕ್ಕಳ ಹಾಗೂ ಮಹಿಳಾ ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ವಿಚಾರಕಿ ಕಾತ್ಯಾಯಿನಿ ಮಾಹಿತಿ ನೀಡಿದರು.

ವಾಲ್ಪಾಡಿಯಲ್ಲಿ ಮೆಸ್ಕಾಂ ಟಿ.ಸಿ. ಅಗತ್ಯದ ಬೇಡಿಕೆ ಇನ್ನೂ ಈಡೇರಿಲ್ಲ, ಗ್ರಾಮೀಣ ಪ್ರದೇಶದ ಸಭೆಗೆ ಬರಬೇಕಿದ್ದ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಬಂದಿಲ್ಲ ಎಂದು ಮೆಸ್ಕಾಂ ನ ಪಾಟೀಲ್ ರ ಮಾತಿಗೆ ಉತ್ತರಿಸಿ ಮಾತನಾಡಿದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರೊಕ್ಕಯ್ಯ ಪೂಜಾರಿ, ಗ್ರಾಮಸ್ಥರು ನೇರ ಹೇಳಿದರೆ ಕೆಲಸ ಆಗುತ್ತಿಲ್ಲ, ಶಾಸಕರು ಹೇಳಿದರೆ ಮರುದಿನವೇ ಆಗುತ್ತದೆ ಎಂದು ಆಕ್ಷೇಪಿಸಿದರು. 

ಕಂದಾಯ ಇಲಾಖೆಯ ಮಹೇಶ್ ಪ್ರಾಕೃತಿಕ ವಿಕೋಪಕ್ಕೆ ಗುರಿಯಾದ ಮನೆಗಳಿಗೆ ಸಿಗುವ ಸೌಲಭ್ಯಗಳನ್ನು ತಿಳಿಸಿದರು. ಅನಿತಾ ಡಿಸೋಜ ಆರೋಗ್ಯ ಇಲಾಖೆಯ ಗ್ರಹ ಆರೋಗ್ಯದ ಬಗ್ಗೆ ತಿಳಿಸಿದರು. ಅರಣ್ಯ ಇಲಾಖೆಯ ಧರ್ಮರಾಜ ಅವರು ಗಿಡನೆಡುವುದರ ಮೂಲಕವಾಗಿ ಹಸಿರೀಕರಣಕ್ಕೆ ಸಹಕರಿಸಬೇಕೆಂದು ಕೇಳಿಕೊಂಡರು. ರುದ್ರಭೂಮಿಯ ಬೇಡಿಕೆ ಆದಷ್ಟು ಶೀಘ್ರ ನೆರವೇರಿಸಲಾಗುವುದೆಂದು ಅರುಣ್ ಕುಮಾರ್ ತಿಳಿಸಿದರು. 

ಪಂಚಾಯತ್ ಕಾರ್ಯದರ್ಶಿ ಶೇಖರ ವರದಿ ಮಂಡಿಸಿದರು. ಸೌಮ್ಯ ಶೆಟ್ಟಿ ಜಮಾ ಖರ್ಚು ಓದಿದರು. ವೇದಿಕೆಯಲ್ಲಿ ಅಧ್ಯಕ್ಷ ವಿಶಾಲಾಕ್ಷಿ, ಉಪಾಧ್ಯಕ್ಷ ಗಣೇಶ್ ಬಿ, ಇತರ ಸದಸ್ಯರುಗಳಾದ ಸುಶೀಲ, ಭವಾನಿ, ಯಶೋಧ, ಶ್ರೀಧರ ಬಂಗೇರ, ವೈಶಾಲಿ, ಹಾಜರಿದ್ದರು. ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಕೊರತೆ ಕಂಡುಬರುತ್ತಿತ್ತು.