ಹರಿಹರದ ಯುವಕ ಅಯೂಬ್ ಜೊತೆಗೆ ಮದುವೆ ನಿಶ್ಚಯವಾಗಿದ್ದ ದಾವಣಗೆರೆಯ ಚಾಂದ್ ಸುಲ್ತಾನಾರನ್ನು ಗುರುವಾರ ಯಾರೋ ಚಾಕುವಿನಿಂದ ಹಲವು ಬಾರಿ ಇರಿದು ಕೊಲೆ ಮಾಡಿದ್ದಾರೆ. ದಾವಣಗೆರೆಯ ವಿನೋಬ ನಗರದ ನಿವಾಸಿ ಮೊಹಮದ್ ಮುಸ್ತಫಾರ ಮಗಳು ಚಾಂದ್ ಸುಲ್ತಾನಾ. ತೆರಿಗೆ ಸಲಹೆಗಾರರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು.
ಚಾಕುವಿನಿಂದ ಇರಿದವನು ಮುಸುಕು ಧರಿಸಿ ಬಂದು ಪರಾರಿಯಾಗಿದ್ದಾನೆ. ಪೋಲೀಸರು ತನಿಖೆ ಆರಂಭಿಸಿದ್ದಾರೆ. ಚಾಂದ್ ಜೊತೆಗೆ ಬೇರೆ ಯಾರಾದರೂ ಮದುವೆಯಾಗಲು ಬಯಸಿದ್ದರೆ ಎಂಬ ವಿಚಾರಣೆ ನಡೆದಿದೆ.