ಮಂಗಳೂರು:  ಅನಿವಾಸಿ ಕರಾವಳಿಗ ಮೈಕೆಲ್ ಡಿಸೋಜಾ ಅವರು ಮಂಗಳೂರು ಧರ್ಮ ಪ್ರಾಂತ್ಯದಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಬಡ ಕ್ಯಾಥೊಲಿಕರಿಗೆ ಮನೆ ನಿರ್ಮಿಸಿದ್ದಾರೆ. ದಾನಿಯೊಂದಿಗೆ ಬಿಶಪ್ ಡಾ. ಪೀಟರ್‌ ಪೌಲ್ ಸಲ್ಡಾನ್ಹಾ ಅವರು ಈ ಮನೆಗಳಿಗೆ ಭೇಟಿ ನೀಡಿದರು.

2024ಕ್ಕೆ ಮನೆ ಕೊಡುಗೆ ಯೋಜನೆಯಡಿ 8 ಹೊಸ ಮನೆಗಳನ್ನು ಕಟ್ಟಿದ್ದು, 20 ಮನೆಗಳನ್ನು ರಿಪೇರಿ ಮಾಡಲಾಗಿದೆ. ಫಲಾನುಭವಿಗಳು ಕ್ರಿಸ್ಮಸ್ ಮತ್ತು ಹೊಸ ವರ್ಷವನ್ನು ಹೊಸ ಮನೆ ಮತ್ತು ನವೀಕೃತ ಮನೆಗಳಲ್ಲಿ ನಡೆಸುವರು.