ಮಂಗಳೂರು: ಮಂಗಳೂರಿನ ಕೊಡಿಯಾಲಬೈಲ್ ವೃತ್ತದಲ್ಲಿ ಸ್ಕೂಟರಿಗೆ ಬಸ್ ಬಡಿದದ್ದರ ಪರಿಣಾಮ ಯುವತಿಯೊಬ್ಬಳ ಪಾದಕ್ಕೆ ಗಂಭೀರ ಗಾಯವಾಗಿದೆ.

ವನಿತಾ ಮತ್ತು ಪುನೀತ್ ರಾಜ್ ಸ್ಕೂಟರಿನಲ್ಲಿ ಹೋಗುವಾಗ ಈ ಅವಘಡ ನಡೆದಿದೆ. ಡಿಕ್ಕಿಯಿಂದ ಇಬ್ಬರೂ ಸ್ಕೂಟರಿನಿಂದ ಕೆಳಕ್ಕೆ ಬಿದ್ದಿದ್ದಾರೆ. ಬಸ್ಸಿನ ಒಂದು ಚಕ್ರ ಯುವತಿಯ ಪಾದದ ಮೇಲೆ ಹರಿದಿದೆ. ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಶ್ಚಿಮ ಸಂಚಾರ ಠಾಣೆಯವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.