ಮಂಗಳೂರು: ನವೆಂಬರ್‌ನಲ್ಲಿ 40ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ, ವಿಶ್ವದ ಪ್ರಮುಖ ಕೊಂಕಣಿ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಇದರ ನೂತನ ಆಡಳಿತ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆಗೊಂಡ ಸದಸ್ಯರು ನಂತರ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.
ಸಾಂಸ್ಕೃತಿಕ ಮುಖಂಡ, ಹಲವಾರು ಬೃಹತ್ ಕಾರ್ಯಕ್ರಮಗಳ ರೂವಾರಿ ಹಾಗೂ ಮಂಗಳೂರಿನ ಪ್ರಸಿದ್ಧ ಉದ್ಯಮಿ ಲುವಿಸ್ ಜೆ ಪಿಂಟೊ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಕಾರ್ಯದರ್ಶಿಯಾಗಿ ಕವಿ ರೊನಾಲ್ಡ್ ಕ್ರಾಸ್ತಾ ಮತ್ತು ಖಜಾಂಚಿಯಾಗಿ ಗಾಯಕ ಸುನಿಲ್ ಮೊಂತೆರೊ ಕಾರ್ಯ ನಿರ್ವಹಿಸಲಿದ್ದಾರೆ. ಇತರೆ ಪದಾಧಿಕಾರಿಗಳ ಹೆಸರುಗಳು ಇಂತಿವೆ: ಸಂಘಟಕ – ಸ್ಟ್ಯಾನಿ ಆಲ್ವಾರಿಸ್, ಉಪಾಧ್ಯಕ್ಷ - ನವೀನ್ ಲೋಬೊ, ಜತೆ ಕಾರ್ಯದರ್ಶಿ - ಕಿಶೋರ್ ಫೆರ್ನಾಂಡಿಸ್, ಸಾರ್ವಜನಿಕ ಸಂಪರ್ಕಾಧಿಕಾರಿ – ವಿಕ್ಟರ್ ಮತಾಯಸ್, ನಾಟಕ - ಅರುಣ್ ರಾಜ್ ರೊಡ್ರಿಗಸ್, ನಾಚ್ ಸೊಭಾಣ್ – ರಾಹುಲ್ ಪಿಂಟೊ, ಸುಮೇಳ್ – ರೈನಾ ಸಿಕ್ವೇರಾ ಹಾಗೂ ಸದಸ್ಯರಾಗಿ ಕೇರನ್ ಮಾಡ್ತಾ, ಎಲ್ರೊನ್ ರೊಡ್ರಿಗಸ್, ಐರಿನ್ ರೆಬೆಲ್ಲೊ, ರೊನಿ ಅರುಣ್, ಅಜಯ್ ಡಿಸೋಜ, ಕಿಂಗ್ ಸ್ಲೀ ನಜ್ರೆತ್, ಲಾರೆನ್ಸ್ ಡಿಸೋಜ ಮತ್ತು ಸುಭಾಷ್ ಗೌಡ ಇರುವರು.
ಸ್ಟೀವನ್ ರೊಡ್ರಿಗಸ್ – ಹೊನ್ನಾವರ, ಜೀವನ್ ಸಿದ್ದಿ – ಉತ್ತರ ಕನ್ನಡ, ಫಾ. ಮಿಲ್ಟನ್ ರೊಡ್ರಿಗಸ್ – ಗೋವಾ, ಸಾಯಿಶ್ ಪನಂದಿಕಾರ್ – ಗೋವಾ, ಲಿಯೊ ಫೆರ್ನಾಂಡಿಸ್ – ಮುಂಬಯಿ, ಡಯಾನ್ ಡಿಸೋಜ – ದುಬಾಯ್, ಸುನಿಲ್ ಡಿಸಿಲ್ವಾ – ಖತಾರ್, ವಿಲ್ಸನ್ ಡಿಸೋಜ – ಆಸ್ಟ್ರೇಲಿಯಾ, ಸುನಿಲ್ ಡಿಕುನ್ಹಾ – ಲಂಡನ್, ಹ್ಯಾರಿಯೆಟ್ ವಿದ್ಯಾಸಾಗರ್ – ಅಮೇರಿಕಾ ಇವರು ಪ್ರಾದೇಶಿಕ ಪ್ರತಿನಿಧಿಗಳಾಗಿ ಸೇವೆ ಸಲ್ಲಿಸಲಿದ್ದಾರೆ. ರೊಯ್ ಕ್ಯಾಸ್ತೆಲಿನೊ – (ಕಲಾಂಗಣ್ ಪಿರ್ಜೆಂತ್) ಮತ್ತು ರೊನಾಲ್ಡ್ ಮೆಂಡೊನ್ಸಾ – (ಕಲಾಂಗಣ್ ಆಡಳಿತ ಮಂಡಳಿ ಅಧ್ಯಕ್ಷ) ಇವರು ಪದನಿಮಿತ್ತ ಸದಸ್ಯರಾಗಿರುವರು.
ಮಾಂಡ್ ಸೊಭಾಣ್ ಗುರಿಕಾರ ದಿವಂಗತ ಎರಿಕ್ ಒಝೇರಿಯೊ ಅವರ ಕನಸಾದ ಕೊಂಕಣಿ ಹಿರಿಮೆಯನ್ನು ಮುಗಿಲೆತ್ತರ ಏರಿಸುವ ಜವಾಬ್ದಾರಿಯನ್ನು ಹೊತ್ತು ಈ ಸಮಿತಿ ಕಾರ್ಯ ನಿರ್ವಹಿಸಲಿದೆ. ಮುಂದಿನ ವರ್ಷಕ್ಕೆ ಕೊಂಕಣಿ ಪುಸ್ತಕಗಳನ್ನು ಇ ಬುಕ್ ಆಗಿ ಪರಿವರ್ತಿಸಿ ಇ ಲೈಬ್ರೆರಿಯನ್ನು ಬಲಪಡಿಸುವುದು, ಕೊಂಕಣಿ ಸಾಹಿತ್ಯವನ್ನು ಒಂದೇ ಛತ್ರದಡಿ ಸಂಯೋಜಿಸುವ ಇ-ಬೊಂಗ್ಸಾಳ್, ಪ್ರದರ್ಶನ ಕಲೆಗಳಿಗೆ ಪ್ರಚಾರ ಮತ್ತು ಪ್ರೋತ್ಸಾಹ ನೀಡುವ ಕೊಂಕಣಿ ಶೋ ಡೊಟ್‌ಕಾಮ್, ಮಕ್ಕಳ ಸಾಹಿತ್ಯ ಸಮ್ಮೇಳನ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ. ಅದರೊಟ್ಟಿಗೆ ತಿಂಗಳ ವೇದಿಕೆ, ಸುಮೇಳ್, ನಾಚ್ ಸೊಭಾಣ್, ಮಾಂಡ್ ನಾಟಕ, ಸುರ್ ಸೊಭಾಣ್, ರಜಾ ಶಿಬಿರ ಇತ್ಯಾದಿ ಎಂದಿನ ನಿಯಮಿತ ಕಾರ್ಯಕ್ರಮಗಳು ನಡೆಯಲಿವೆ. ಎರಿಕ್ ನೆನಪಲ್ಲಿ ಮುಂದಿನ ವರ್ಷದ ಕೊನೆಯೊಳಗೆ ಜಗದಗಲದೊಳಗೆ ವಿವಿಧತೆಯಲ್ಲಿ ಕೊಂಕಣಿ ಏಕತೆಯನ್ನು ಸಂಭ್ರಮಿಸುವ 12 ದಿನ, 12 ಗಂಟೆ ಹಾಗೂ 12 ನಿಮಿಷಗಳ ʻಕೊಂಕಣಿ ನಿರಂತರಿ; ಸಂಸಾರ್ ಸರಾಸರಿʼ ಎಂಬ ಗಾಯನದ ಗಿನ್ನೆಸ್ ದಾಖಲೆಯ ತಯಾರಿ ನಡೆಯಲಿದೆ.