ಕಾರ್ಕಳ: ಗೋ ಕಳ್ಳರ ಅಟ್ಟಹಾಸ ಮಿತಿ ಮೀರುತ್ತಿದೆ. ಹೈನುಗಾರಿಕೆ ನಡೆಸಿ ಜೀವ ನಡೆಸುತ್ತಿರುವ ಮಹಿಳೆಯ ಮನೆಯ ಹಟ್ಟಿಯಿಂದಲೇ ದನಗಳ ಕಳ್ಳತನ ನಡೆದಿದೆ. ಮಾತ್ರವಲ್ಲದೆ ಮಹಿಳೆಗೆ ಮಾರಕಾಸ್ತ್ರದಿಂದ ಬೆದರಿಸಿರುವುದು ಅತಂಕಕಾರಿ ಘಟನೆ. ಈ ರೀತಿ ಪೋಲಿಸರ ಭಯವಿಲ್ಲದೆ ಕಳ್ಲತನ ನಡೆಯುವುದನ್ನು ನೋಡಿದರೆ ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾದ ಹಾಗೆ ತೋರುತ್ತಿದೆ.ಈ ರೀತಿಯ ಘಟನೆಗಳಿಂದ ಜನಸಾಮಾನ್ಯರು ಆತಂಕದಲ್ಲಿದ್ದು ಪೊಲೀಸ್ ಇಲಾಖೆಯ ಮೇಲೆ ನಂಬಿಕೆ ಕಳೆದುಕೊಂಡಂತಿದೆ ಪರೋಕ್ಷವಾಗಿ ಪೊಲೀಸ್ ಇಲಾಖೆ ಬೆಂಬಲ ಈ ದುಷ್ಕರ್ಮಿಗಳಿಗೆ ಸಿಗುತ್ತಿದೆಯೋ ಎನ್ನುವ ಮಾತುಗಳು ಕೂಡ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ.
ಈ ರೀತಿಯ ಪ್ರಕರಣ ಕಾರ್ಕಳದಲ್ಲಿ ನಡೆಯುತ್ತಿರುವುದು ಇದೇ ಮೊದಲಲ್ಲ ಆದರೆ ಪೋಲಿಸ್ ಇಲಾಖೆ ದನಗಳ್ಳರ ದುಷ್ಕೃತ್ಯಗಳಿಗೆ ಕಡಿವಾಣ ಹಾಕಲು ಸಂಪೂರ್ಣ ವಿಫಲರಾಗಿದ್ದಾರೆ. ಒಂದು ರೀತಿಯಲ್ಲಿ ರಾಜ್ಯ ಕಾಂಗ್ರೆಸ್ಸ್ ಸರ್ಕಾರದ ಓಲೈಕೆ ನೀತಿಯು ಗೋ ಕಳ್ಳರಿಗೆ ವರದಾನ ಆದಂತಿದೆ.ಈ ದುಷ್ಕೃತ್ಯದ ಹಿಂದಿರುವ ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸದಿದ್ದಲ್ಲಿ ಸಮಸ್ತ ಹಿಂದೂ ಸಮಾಜ ತಮ್ಮ ರಕ್ಷಣೆಗೆ ಬೀದಿಗಿಳಿದು ಪೊಲೀಸ್ ಠಾಣೆಯ ಮುಂದೆಯೇ ಪ್ರತಿಭಟಿಸುವ ಸಮಯ ಬರಬಹುದು ಎಂದು ಕಾರ್ಕಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಕುಕ್ಕುಂದೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.