ಮುಂಬಯಿ: ಸ್ಥಾನೀಯ ಜನಪರ ಕಾಳಜಿ ಪ್ರಶಂಸನೀಯ. ಸಂಸ್ಥೆಯೊಂದು ಹುಟ್ಟುಪಡೆದು ಯೌವನಾವಸ್ಥೆಯತ್ತ ಬೆಳೆದು ನಿಂತಿರುವುದು ಆ ಸಂಸ್ಥೆಯ ನಿಜಾರ್ಥದ ಸೇವೆಯನ್ನು ನಿಜವಾಗಿಸುತ್ತದೆ. ಸುಮಾರು ಎರಡುವರೆ ದಶಕಗಳ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವೆಯಿಂದಲೇ ಸಮಾಜವು ಬಳಗವನ್ನು ಗುರುತಿಸಿ ಕೊಂಡಿದೆ. ಇಂತಹ ಸಂಸ್ಥೆಗಳ ಅವಿರತ ಶ್ರಮದಿಂದಲೇ ಸಮಾಜವು ಮುನ್ನಡೆಯುತ್ತಿದೆ. ಭವಿಷ್ಯದಲ್ಲೂ ಈ ಬಳಗವು ನಿಸ್ವಾರ್ಥ ಸೇವೆಯೊಂದಿಗೆ ಸೇವಾ ಕ್ಷೇತ್ರದಲ್ಲಿ ಮಿನುಗುತಾರೆಯಾಗಿ ಪ್ರಕಾಶಿಸಿಸಲಿ ಎಂದು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ ನುಡಿದರು.
ಚಾರ್ಕೋಪ್ ಕನ್ನಡಿಗರ ಬಳಗ ಕಾಂದಿವಲಿ (ರಿ.) ಸಂಸ್ಥೆಯು ತನ್ನ ಶಾರದಾ ಪೂಜಾ ರಜತ ಮಹೋತ್ಸವವನ್ನು ಆದಿತ್ಯವಾರ ಕಾಂದಿವಲಿ ಪಶ್ಚಿಮದ ಚಾರ್ಕೋಪ್‍ನ ದಯಾನಂದ ಶಾಲಾ ಆರ್ಯ ಸಮಾಜ ಬ್ಯಾಂಕ್ವೆಟ್ ಹಾಲ್‍ನಲ್ಲಿನ ಸ್ವರ್ಗೀಯ ಎಂ.ಸೀತಾರಾಮ ರಾವ್ ವೇದಿಕೆಯಲ್ಲಿ ವಿಜೃಂಭನೆಯಿಂದ ನೇರವೇರಿಸಿದ್ದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿದ್ದು ಸೂರ್ಯಕಾಂತ್ ದೀಪ ಬೆಳಗಿಸಿ ಸಮಾರಂಭ ಉದ್ಘಾಟಿಸಿ ನಾಡಿನ ಸಮಸ್ತ ಜನತೆಗೆ ದಸರೋತ್ಸವದ ಶುಭಾಶಯವನ್ನಿತ್ತರು.
ಸಿಕೆಬಿ ಅಧ್ಯಕ್ಷ ರವೀಂದ್ರ ಎಂ.ಶೆಟ್ಟಿ ಮುಂದಾಳುತ್ವ ಹಾಗೂ ಬಂಟ್ಸ್ ಸಂಘ ಮುಂಬಯಿ ಇದರ ನಿಧಿ ಸಂಗ್ರಹಣಾ ಸಮಿತಿ ಕಾರ್ಯಾಧ್ಯಕ್ಷ ಮುಂಡಪ್ಪ ಎಸ್.ಪಯ್ಯಾಡೆ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನದ ಅಧ್ಯಕ್ಷ ಕೈರಬೆಟ್ಟು ವಿಶ್ವನಾಥ ಭಟ್ ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ಅತಿಥಿs ಅಭ್ಯಾಗತರುಗಳಾಗಿ ಉತ್ತರ-ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ, ತುಳುನಾಡ ಐಸಿರಿ ವಾಪಿ ಗೌರವಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಅಧ್ಯಕ್ಷ ನವೀನ್ ಎಸ್.ಶೆಟ್ಟಿ, ಹೇರೂರು, ಕ್ಯಾಪ್ಟನ್ ಸ್ವಿಚ್‍ಸ್ ಆ್ಯಂಡ್ ಆಕ್ಸೆಸರೀಸ್ ಕಾರ್ಯಾಧ್ಯಕ್ಷ ಗೋಪಾಲ್ ಎಂ.ಪೂಜಾರಿ, ತುಳುಕೂಟ ಅಸಲ್ಫ ಅಧ್ಯಕ್ಷ ರಮನಾಥ್ ಟಿ.ಕೋಟ್ಯಾನ್ ಉಪಸ್ಥಿತರಿದ್ದರು.
ಈ ಶುಭಾವಸರದಲ್ಲಿ ತುಳು-ಕನ್ನಡಿಗ ಸಾಧಕರುಗಳಾದ ಮನೋಜ್ ಸಿ.ಪೂಜಾರಿ (ಮಾಜಿ ಅಧ್ಯಕ್ಷರು, ಕನ್ನಡ ಸಮಾಜ ಸೂರತ್), ಶೇಖರ್ ಸಸಿಹಿತ್ಲು (ಸಂಗೀತಗಾರ), ರಂಗ ಕಲಾವಿದ, ಚಲನಚಿತ್ರಕಾರರಾದ ದಯಾನಂದ ರೈ ಬೆಟ್ಟಂಪಾಡಿ, ಅಶ್ವತ್ ನಾಯಕ್, ಲತೇಶ್ ಎಂ.ಪೂಜಾರಿ (ಸಂಘಟಕ), ಸಚಿನ್ ಪೂಜಾರಿ, ಪತ್ರಕರ್ತರಾದ ರಮೇಶ್ ಉದ್ಯಾವರ, ದಿನೇಶ್ ಕುಲಾಲ್ ಮತ್ತಿತರರನ್ನು ಸನ್ಮಾನಿಸಲಾಯಿತು.
ಅಪರಾಹ್ನ ಮುಂಡಪ್ಪ ಎಸ್.ಪಯ್ಯಾಡೆ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರೋಪ ಸಭಾಕಾರ್ಯಕ್ರಮದಲ್ಲಿ ಅಧ್ಯಕ್ಷ ರವೀಂದ್ರ ಎಂ.ಶೆಟ್ಟಿ, ಅತಿಥಿs ಅಭ್ಯಾಗತರುಗಳಾಗಿ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರÀವೀಣ್ ಭೋಜ ಶೆಟ್ಟಿ, ವಿಶ್ವಕರ್ಮ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ರವೀಶ್ ಜಿ.ಆಚಾರ್ಯ, ಸಂಜೀವಿನಿ ಆಸ್ಪತ್ರೆ ಅಂಧೇರಿ ಇದರ ನಿರ್ದೇಶಕಿ ವಿಜಯಲಕ್ಷ್ಮಿ ಸುರೇಶ್ ರಾವ್, ಧ್ವನಿ ಡಬ್ಬಿಂಗ್ ಕಲಾವಿದ ಜಯಶೀಲ ಕೆ.ಸುವರ್ಣ, ಪದ್ಮನಾಭ ಎಸ್.ಪಯ್ಯಾಡೆ, ಪ್ರಕಾಶ್ ಬಿ.ಭಂಡಾರಿ, ಮುಂಡ್ಕೂರು ರತ್ನಾಕರ್ ಶೆಟ್ಟಿ, ಮನೋಹರ್ ಶೆಟ್ಟಿ, ವಿಜಯ್ ಎಂ.ಭಂಡಾರಿ, ಅವಿನಾಶ್ ಶೆಟ್ಟಿ ಮತ್ತಿರರ ಗಣ್ಯರು ಅತಿಥಿsಗಳಾಗಿದ್ದು ಉಪಸ್ಥಿತರಿದ್ದರು.
ಪ್ರೇಮನಾಥ್ ಶೆಟ್ಟಿ ವಾಪಿ, ಸದಾಶಿವ ಪೂಜಾರಿ, ಪುಷ್ಪರಾಜ್ ಶೆಟ್ಟಿ ಪುತ್ತೂರು, ಗಣೇಶ್ ಶೆಟ್ಟಿ, ಸುಕೇಶ್ ಶೆಟ್ಟಿ ವಾಪಿ ಉಪಸ್ಥಿತರಿದ್ದು ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆಗೈದ ಕರ್ನಾಟಕ ಕೃಷಿ ಪ್ರಶಸ್ತಿ ವಿಜೇತ ಅಡ್ಯಾರ್ ನಡಿಗುತ್ತು ತಿಮ್ಮಪ್ಪ ಶೆಟ್ಟಿ ಸ್ಮಾರಕ ಪ್ರಶಸ್ತಿಯನ್ನು ವಿಶ್ವನಾಥ ಜಿ.ಪೂಜಾರಿ (ಮಾಜಿ ಅಧ್ಯಕ್ಷರು, ಗುಜರಾತ್ ಬಿಲ್ಲವರ ಸಂಘ), ಹಿರಿಯ ನಾಟಕ ಕಲಾವಿದೆ-ನಿರ್ದೇಶಕಿ ಭಾರತಿ ಕೊಡ್ಲೇಕರ್ ಸ್ಮಾರಕ ಪ್ರಶಸ್ತಿಯನ್ನು ಅರೂಷ ಎನ್.ಶೆಟ್ಟಿ (ಹಿರಿಯ ನಾಟಕ-ಧ್ವನಿ ಡಬ್ಬಿಂಗ್ ಕಲಾವಿದೆ) ಇವರಿಗೆ ಪ್ರದಾನಿಸಿ ಗೌರವಿಸಲಾಯಿತು.
ಹಾಗೂ ಸಿಎ| ಸತೀಶ್ ಎನ್.ಶೆಟ್ಟಿ (ಸಲಹಾ ಸಮಿತಿ ಸದಸ್ಯ, ಬಂಟ್ಸ್ ಸಂಘ ಮುಂಬಯಿ), ಸಿಎ| ಸುರೇಂದ್ರ ಕೆ.ಶೆಟ್ಟಿ ಮಾಜಿ ಅಧ್ಯಕ್ಷ, ಬೊಂಬೇ ಬಂಟ್ಸ್ ಅಸೋಸಿಯೇಶನ್), ವಾಸುದೇವ ಮಾರ್ನಾಡ್ (ಯಕ್ಷಗಾನ ಗುರು), ಸುರೇಂದ್ರ ಮಾರ್ನಾಡ್ (ನಾಟಕ ಕಲಾವಿದ-ಕಾರ್ಯಕ್ರಮ ಸಂಘಟಕ) ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಳಗದ ಟ್ರಸ್ಟಿಗಳಾದ ಜಯ ಸಿ.ಶೆಟ್ಟಿ, ಭಾರತಿ ಎಸ್.ರಾವ್ ಸೇರಿದಂತೆ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತ ಸದಸ್ಯರು, ಸಲಹೆಗಾರರು ಸೇರಿದಂತೆ ಸದಸ್ಯ-ಸದಸ್ಯೆಯರನೇಕರು ಹಾಜರಿದ್ದು, ಸಂಘಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಸದಸ್ಯರಾದ ಹೆಚ್.ಜಯ ದೇವಡಿಗ (ಕ್ರೀಡಾಪಟು), ಪೊಲಿ ಜಯಪಾಲ್ ಶೆಟ್ಟಿ (ಅಧ್ಯಕ್ಷರು, ಕಾಂದಿವಲಿ ಕನ್ನಡ ಸಂಘ), ಶಂಕರ್ ಡಿ.ಪೂಜಾರಿ (ಮಾಜಿ ಪ್ರಧಾನ ಕಾರ್ಯದರ್ಶಿ, ಮಾಲಾಡ್ ಕನ್ನಡ ಸಂಘ), ರಮೇಶ್ ಶೆಟ್ಟಿ ಪಯ್ಯಾರ್ (ಟ್ರಸ್ಟಿ, ಗೋರೆಗಾಂವ್ ಕರ್ನಾಟಕ ಸಂಘ), ಸುಂದರ್ ಕೆ.ಪೂಜಾರಿ (ಯಕ್ಷಗಾನ ಕಲಾವಿದ), ಮಹಾಬಲ ಪೂಜಾರಿ, ಮಹೇಂದ್ರ ಕಾಂಚನ್, ಅಶೋಕ್ ಶೆಟ್ಟಿ ಎಲ್‍ಐಸಿ, ಸಿಎ| ವಿನಯ್ ಭಟ್, ರಮೇಶ್ ಬಂಗೇರ, ಆರ್.ಡಿ ಕೋಟ್ಯಾನ್, ಕರುಣಾಕರ ಕನ್ನರ್‍ಪಾಡಿ, ಭಾಸ್ಕರ್ ವಿ.ಶೆಟ್ಟಿ, ಪ್ರವೀಣಾ ಎಂ.ರಾಥೋಡ್, ಚೇತನಾ ಎಸ್.ಶೆಟ್ಟಿ, ಪುಷ್ಪ ಆಚಾರ್ಯ, ವನಜಾ ಡಿ.ಶೆಟ್ಟಿ, ತನುಜಾ ಭಟ್, ಪ್ರೊ. ಆಶಾನಾಥ್, ನೀನಾ ಪಿ.ಶೆಟ್ಟಿ ಮೊದಲಾದವರನ್ನು ಸತ್ಕರಿಸಿ ಗೌರವಿಸಲಾಯಿತು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶಾರದಾ ಮಹಾಪೂಜೆ ನೆರವೇರಿಸಲಾಗಿದ್ದು ವಿದ್ವಾನ್ ಸಂತೋಷ್ ಭಟ್ ತನ್ನ ವೈಧಿಕತ್ವದಲ್ಲಿ ಸಹ ಪುರೋಹಿತರೊಂದಿಗೆ ಮಹಾಪೂಜೆ ನೆರವೇರಿಸಿ ಹರಸಿದರು. ಬಳಗದ ಟ್ರಸ್ಟಿ ಭಾಸ್ಕರ್ ಸರಪಾಡಿ ಮತ್ತು ಪುಷ್ಪ ಭಾಸ್ಕರ್ ದಂಪತಿ ಪೂಜೆಯ ಯಜಮಾನತ್ವ ವಹಿಸಿದ್ದರು. ಸದಸ್ಯರು ಭಜನೆ ನಡೆಸಿದ್ದು ತೀರ್ಥ ಪ್ರಸಾದ ವಿತರಣೆಯೊಂದಿಗೆ ಧಾರ್ಮಿಕ ವಿಧಿಗಳು ನೇರವೇರಿದವು.
ಬಳಗದ ಗೌ| ಪ್ರ| ಕಾರ್ಯದರ್ಶಿ ಗುರುಪ್ರಕಾಶ್ ಎಂ.ಕೋಟ್ಯಾನ್ ಸ್ವಾಗತಿಸಿದರು. ಬಳಗದ ಗೌ| ಕೋಶಾಧಿಕಾರಿ ರಾಜೀವಿ ಆರ್.ಕೋಟ್ಯಾನ್, ಮಹಿಳಾ ವಿಭಾಗಧ್ಯಕ್ಷೆ ಪದ್ಮಾವತಿ ಬಿ.ಶೆಟ್ಟಿ, ಸಂಯೋಜಕಿ ಶಾಂತಾ ಭಟ್, ವಾರ್ಷಿಕೋತ್ಸವ ಮತ್ತು ಪೂಜಾ ಸಮಿತಿ ಸಂಯೋಜಕ ಹರೀಶ್ ಕೆ.ಚೇವರ್ ಅತಿಥಿಗಳನ್ನು ಹಾಗೂ ಲತಾ ಬಂಗೇರಾ, ವೀಣಾ ಸುವರ್ಣ, ಲಕ್ಷ್ಮೀ ಆಚಾರ್ಯ ಸನ್ಮಾನಿತರನ್ನು ಪರಿಚಯಿಸಿದರು. ರೂಪಾ ಭಟ್ ಮತ್ತು ಅಶೋಕ್ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು. ಭಾಸ್ಕರ್ ಸರಪಾಡಿ ಧನ್ಯವದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಚಿಣ್ಣರಬಿಂಬ ಕಾಂದಿವಲಿ, ವಿೂರಾ-ಭಯಂದರ್ ಶಿಬಿರದ ಮಕ್ಕಳು ವಾಸು ಮಾರ್ನಾಡ್ ನಿರ್ದೇಶನದಲ್ಲಿ ಬಳಗದ ಸದಸ್ಯರು `ಇಂದ್ರಜೀತು ಕಾಳಗ' ಯಕ್ಷಗಾನ ಪ್ರದರ್ಶಿಸಿದರು.