ಲೊರೆಟ್ಟೊ: ಸಂತ ವಿನ್ಸೆಂಟ್ ದಿ ಪಾಲ್ ಅಂತರಾಷ್ಟ್ರೀಯ ಸಭೆಯ ಲೊರೆಟ್ಟೊ ಸಮ್ಮೇಳನದ ವಾರ್ಷಿಕ ದಿನಾಚರಣೆ ಲೊರೆಟ್ಟೊ ಮಾತಾ ಸಭಾಭವನದಲ್ಲಿ ಜರುಗಿತು. ಬೆಳಗಿನ ಬಲಿ ಪೂಜೆಯ ಬಳಿಕ ಚರ್ಚ್ ಸಭಾಂಗಣದಲ್ಲಿ ಈ ಆಚರಣೆಯನ್ನು ಆಚರಿಸಲಾಯಿತು.
ಮಂಗಳೂರು ತಮ್ಮ ಪ್ರಾಂತ್ಯದ ಸಭೆಯ ಅಧ್ಯಕ್ಷರಾಗಿರುವ ಜೋ ಕುವೆಲ್ಲೊ ಅಂತರಾಷ್ಟ್ರೀಯ ವಲಯದಲ್ಲಿ ಸಂತ ವಿನ್ಸೆಂಟ್ ದಿ ಪಾಲ್ ಸಭೆಯ ಸವಿಸ್ತಾರ ಮಾಹಿತಿ ಅವರು ಮಾಡುವ ಸೇವಾ ಕಾರ್ಯಕ್ರಮದ ಬಗ್ಗೆ ಹಾಗೂ ಮುಂದಿನ ಯೋಜನೆ ಬಗ್ಗೆ ಬಡವರ ದೀನದಲಿತರ ಹಾಗೂ ರೋಗ ಗ್ರಸ್ತಗಳಿಗೊಸ್ಕರ, ಹಾಗೂ ಬಡ ಮಕ್ಕಳ ವಿದ್ಯಾಭ್ಯಾಸ ಗೋಸ್ಕರ ಅವರು ಮಾಡುವ ಸೇವೆಯ ಬಗ್ಗೆ ಸವಿಸ್ತಾರ ರೀತಿಯಲ್ಲಿ ಸಭೆಯಲ್ಲಿ ತಿಳಿಸಿದರು. ಲೊರೆಟ್ಟೊ ಧರ್ಮ ಕ್ಷೇತ್ರದ ಧರ್ಮ ಗುರುಗಳಾದ ವಂದನಿಯ ಫ್ರಾನ್ಸಿಸ್ ಕ್ರಾಸ್ತರವರು ಮಾತನಾಡಿ ಬಡವರ ಹಾಗೂ ಬಡ ಮಕ್ಕಳ ವಿದ್ಯಾಭ್ಯಾಸ ಗೋಸ್ಕರ ನಮ್ಮ ಘಟಕದಲ್ಲಿ ಹಾಗೂ ಮಂಗಳೂರು ಧರ್ಮ ಪ್ರಾಂತ್ಯದಲ್ಲಿ ಈ ಸಭೆಯು ನಡೆಸುವ ಕಾರ್ಯ ವೈಖರಿಯನ್ನು ಸ್ಲಾಗಿಸಿ, ಸ ಹೃದಯದ ದಾನಿಗಳ ವಿಶೇಷ ತ್ಯಾಗದಿಂದ ಅವರನ್ನು ಅಭಿನಂದಿಸಿದರು
ಈ ಸಂದರ್ಭದಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಸಿಪ್ರಿಯಾನ್ ಡಿಸೋಜಾ, ಕಾರ್ಯದರ್ಶಿ ಶೈಲಾ ಬರ್ಬೊಜಾ, ಆಯೋಗದ ಸಂಚಾಲಕರಾದ ಪ್ರಕಾಶ್ ವಾಸ್, ಖಜಾಂಚಿಯಾದ ಹ್ಯೂಬರ್ಟ್ ಲೋಬೊ ಹಾಗೂ ತನುಮನದ ದಾನಿಗಳು, ಸದಸ್ಯರು ಉಪಸ್ಥಿತರಿದ್ದರು.ಅಲಿಸ್ ಸಿಕ್ವೇರಾ ಸಮ್ಮೇಳನದ ವರದಿ ವಾಚಿಸಿದರು. ಅಧ್ಯಕ್ಷರಾದ ಫೆಲಿಕ್ಸ್ ಡಿಸೋಜರವರು ಸ್ವಾಗತಿಸಿದರು, ಅಲೆಕ್ಸ್ ಸಿಕ್ವೇರಾ ವಂದಿಸಿದರು. ಸಿರಿಲ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.