ನಿಟ್ಟೆ, ಕಾರ್ಕಳ:  ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ 6 ಕೆ.ಎ.ಆರ್ ನೌಕಾ ಉಪಘಟಕದ ಕೆಡೆಟ್ಗಳಾದ ಕೆಡೆಟ್ ಕ್ಯಾಪ್ಟನ್ ಸ್ವಸ್ತಿಕ್ ಎಸ್ ದೇವಾಡಿಗ (7 ನೇ ಸೆಮಿಸ್ಟರ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಡೇಟಾ ಸೈನ್ಸ್ ವಿಭಾಗ), ಪಿಒ ಕೆಡೆಟ್ ರಿಶೋನ್ ಆರೋಲ್ ಮಸ್ಕರೇನ್ಹಾಸ್ (7 ನೇ ಸೆಮಿಸ್ಟರ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗ) ಮತ್ತು ಲೀಡಿಂಗ್ ಕೆಡೆಟ್ ಮೊನಿಶ್ ಪಿ ಎಂ (5 ನೇ ಸೆಮಿಸ್ಟರ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗ), ಅಖಿಲ ಭಾರತ ನೌಕಾ ಸೈನಿಕ ಶಿಬಿರ 2025 ರಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಿದರು. 

ಸೆಪ್ಟೆಂಬರ್ 1 ರಿಂದ 12 ರ ನಡುವೆ ಲೋನಾವಾಲಾದ ಐಎನ್ಎಸ್ ಶಿವಾಜಿಯಲ್ಲಿ ಈ ಶಿಬಿರವು ನಡೆಯಿತು. ಆರೋಗ್ಯ ಮತ್ತು ನೈರ್ಮಲ್ಯ ಪರೀಕ್ಷೆಯಲ್ಲಿ ಪಿಒ ಕೆಡೆಟ್ ರಿಶೋನ್ ಆರೋಲ್ ಮಸ್ಕರೇನ್ಹಾಸ್ ಮತ್ತು ಲೀಡಿಂಗ್ ಕೆಡೆಟ್ ಮೋನಿಶ್ ಪಿಎಂ ಕಂಚಿನ ಪದಕಗಳನ್ನು ಗೆದ್ದರು. ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವು AINSC2025 ರ ಒಟ್ಟಾರೆ ಅತ್ಯುತ್ತಮ ನಿರ್ದೇಶನಾಲಯ ಗೌರವವನ್ನು ಗೆದ್ದುಕೊಂಡಿತು.