ಕೊರೊನಾ 3ನೇ ಅಲೆಯನ್ನು ತಡೆಗಟ್ಟಲು ಮುಂಜಾಗ್ರತೆ ಕ್ರಮ ವಹಿಸಬೇಕಾಗಿದ್ದು, ಇದನ್ನು ಬಹಳ ಜಾಗರೂಕತೆಯಿಂದ ನಿಭಾಯಿಸಬೇಕೆಂದು, ಪಳ್ನೀರ್ ವಾರ್ಡಿನಲ್ಲಿ ಮನೆಮನೆಗೆ ತೆರಳಿ, ಲಸಿಕೆ ಪಡೆಯುವ ಮತ್ತು ಆರ್ಥಿಕವಾಗಿ ಹಿಂದುಳಿದ ಮನೆಗಳಿಗೆ ಆರ್ಥಿಕವಾಗಿ ಸಹಾಯ ನೀಡಿ, 3ನೇ ಅಲೆ ಬಾರದಂತೆ ಮುಂಜಾಗ್ರತೆ ಕ್ರಮ ವಹಿಸಲು ಮಾಹಿತಿಗಳನ್ನು ನೀಡಿದರು. ಈ ಸಂದರ್ಭದಲ್ಲಿ ದಿನಸಿ ಕಿಟ್ ಮತ್ತು ಪ್ರಿವೆಂಶನ್ ಕಿಟ್ಟನ್ನು ವಿತರಿಸಿದರು. ಲಸಿಕೆಯನ್ನು ಪಡೆಯಲು ಮಾಡದೇ ಇದ್ದವರ ಹೆಸರುಗಳನ್ನು ಸ್ಥಳದಲ್ಲಿಯೇ ನೋಂದಾಯಿಸುವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಕಾಪೋ೯ರೇಟರ್ ಭಾಸ್ಕರ್ ರಾವ್, ಸ್ಥಳೀಯ ಕಾಂಗ್ರೆಸ್ ಕಾರ್ಯದರ್ತೆ ಗೀತಾ ಅತ್ತಾವರ, ಸಲೀಂ ಮೆಕ್ಕಾ, ಹಸನ್ ಪಳ್ನೀರ್, ಯೂಸೂಫ್ ಉಚ್ಛಿಲ್ ಮುಂತಾದವರು ಉಪಸ್ಥಿತರಿದ್ದರು.