ಇತ್ತೀಚೆಗೆ ತೀವ್ರ ಆಕಸ್ಮಿಕವಾಗಿ ಹೃದಯಘಾತದಿಂದ ಮೃತರಾದ ಶೂರಶೇಖರ್ ಅಚಾರ್ಯ ಇವರ ಮನೆಗೆ ಭೇಟಿ ನೀಡಿ, ಸಾಂತ್ವನ ನೀಡಿದರಲ್ಲದೇ, ಸರಕಾರದಿಂದ ಅಸಂಘಟಿತ ಕಾರ್ಮಿಕರು ಮರಣ ಪಟ್ಟಾಗ ಸಿಗುವ ಸೌಲಭ್ಯವನ್ನು ನೀಡಲು ಕಾರ್ಮಿಕ ಅಧಿಕಾರಿಗಳಿಗೆ ಸೂಚಿಸಿದರು ಮತ್ತು ಮೃತ ಕುಟುಂಬಕ್ಕೆ ಸಾಂತ್ವನ ನೀಡುವ ಜೊತೆಗೆ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬವಾದ್ದರಿಂದ ಅವರಿಗೆ ದಿನಸಿ ಕಿಟ್ಟುಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್ ಭಾಸ್ಕರ್ ರಾವ್, ಸ್ಥಳೀಯ ಕಾಂಗ್ರೆಸ್ ಕಾರ್ಯದರ್ಶಿ ಗೀತಾ ಅತ್ತಾವರ, ಸಲೀಂ ಮೆಕ್ಕಾ, ಹಸನ್ ಪಳ್ನೀರ್, ಯೂಸೂಫ್ ಉಚ್ಛಿಲ್ ಮುಂತಾದವರು ಉಪಸ್ಥಿತರಿದ್ದರು.