ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಕಿನ್ನಿಗೋಳಿ: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕಿನ್ನಿಗೋಳಿಯ ಮುಖ್ಯಪ್ರಾಣ ಶೆಟ್ಟಿಗಾರ್ ತಮ್ಮ 84 ನೇ ವರ್ಷದಲ್ಲಿ ತೀರಿಕೊಂಡರು.
ಸುಮಾರು 56 ವರ್ಷ ಕಾಲ ಕಟೀಲು, ಇರಾ, ಸಾಲಿಗ್ರಾಮ, ಕದ್ರಿ ಇತ್ಯಾದಿ ಮೇಳಗಳಲ್ಲಿ ವಿವಿಧ ವೇಷ ಧರಿಸಿ, ಹಾಸ್ಯ ಕಲಾವಿದನಾಗಿ ಪ್ರಸಿದ್ಧಿ ಪಡೆದ ಇವರು ಗೋಳಿಜೋರ ಕಲಾ ಸಂಘದ ಹವ್ಯಾಸಿ ವೇಷಧಾರಿಯೂ ಆಗಿದ್ದರು.