ಕಾರ್ಕಳ: ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ನರಮೇದವನ್ನು ಖಂಡಿಸಿ ಕಾರ್ಕಳ ಕಾಂಗ್ರೆಸ್ ಸಮಿತಿ ಯುವ ಕಾಂಗ್ರೆಸ್ ಕಾರ್ಕಳ ಹಾಗೂ ಹೆಬ್ರಿ ಬ್ಲಾಕ್ ಸಮೀತಿ ಹಾಗೂ ಎನ್ ಎಸ್ ಯು ಐ ಆಶ್ರಯದಲ್ಲಿ ಕಾರ್ಕಳದ ಬಸ್ಸು ನಿಲ್ದಾಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಅನಂತಶಯನ ವೃತ್ತದಿಂದ ಬಸ್ ನಿಲ್ದಾಣದವರೆಗೆ ಪಂಜೀನ ಮೆರವಣಿಗೆ ನಡೆಸಲಾಯಿತು.
ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಮಾತನಾಡಿದ ಅವರು ಮಾತನಾಡಿದ ಉಗ್ರದ ದಾಳಿಗೆ ಅಮಾಯಕರು ಹಾಗೂ ಸೈನಿಕರು ಬಲಿ ಯಾಗಿದ್ದಾರೆ. ಇದು ಖಂಡನೀಯ ಭದ್ರತಾ ವ್ಯವಸ್ಥೆ ಬಗ್ಗೆ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಲು ಕೇಂದ್ರ ಸರ್ಕಾರ ತೀವ್ರ ವಿಫಲವಾಗಿದೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಮಾತನಾಡಿ ಉಗ್ರರದಾಳಿಗೆ ಕೇಂದ್ರ ಸರಕಾರ ವೈಫಲ್ಯವೇ ಕಾರಣ ಈ ಕೃತ್ಯಕ್ಕೆ ಕಾರಣರಾದ ಉಗ್ರರಿಗೆ ತ ಕ್ಕ ಶಿಕ್ಷೆ ಆಗಲೇಬೇಕು ಸರಕಾರ ಉಗ್ರರನ್ನು ಸದೇ ಬಡಿಯಲೇ ಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶೇಖರ ಮಡಿವಾಳ್ ಗೋಪಿನಾಥ್ ಭಟ್ ಕೃಷ್ಣ ಶೆಟ್ಟಿ, ಸೂರಜ್ ಶೆಟ್ಟಿ, ಸುರಯ್ಯ ಅಂಜು, ಶೇಕ್ ಶಬ್ಬೀರ್, ಮಲ್ಲಿಕ್, ಹಾಗೂ ಇನ್ನಿತರ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.