ವರದಿ ರಾಯಿ ರಾಜಕುಮಾರ ಮೂಡುಬಿದಿರೆ 


ಮೂಡುಬಿದಿರೆಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ಘಟಕ, ಬೆಳುವಾಯಿ ಇವರ ಆಟಿದೊಂಜಿ ಕಾರ್ಯಕ್ರಮ ಕಮಲಮ್ಮ ಸಭಾ ಭವನದಲ್ಲಿ ನಡೆಯಿತು. ಮಹಿಳಾ ಘಟಕದ ಅಧ್ಯಕ್ಷ ಶುಭ ಸುರೇಶ್ ಪೂಜಾರಿ  ಅಧ್ಯಕ್ಷತೆ ವಹಿಸಿದ್ದರು . 

ಸ್ಥಾಪಕ ಅಧ್ಯಕ್ಷ  ವಸಂತಿ ಪದ್ಮನಾಭ ಮತ್ತು ಮಾಜಿ ಅಧ್ಯಕ್ಷ ಸುಮತಿ ರಾಜು ಪೂಜಾರಿ, ರಾಜೇಶ್ ಸುವರ್ಣ, ಸುರೇಶ್ ಕೆ. ಪೂಜಾರಿ, ಗೋಲಾರ  ಉಪಸ್ಥಿತರಿದ್ದರು. ಆಟಿ ಕಲೆಂಜದ ಆಗಮನದೊಂದಿಗೆ, ಕಳಸೆ ಸೇರಿಗೆ ಅಕ್ಕಿಯನ್ನು ಸುರಿಯುವ ಮೂಲಕ, ತೆಂಗಿನ ಸಿರಿಯನ್ನು ಅರಳಿಸುವ ಮೂಲಕ, ಗೌರವ ಅಧ್ಯಕ್ಷ ಪಾರ್ವತಿ ಭಾಸ್ಕರ ಕೋಟ್ಯಾನ್ ಉದ್ಘಾಟಿಸಿದರು. ಕಾರ್ಯದರ್ಶಿ ಸುಜಯ ಹರೀಶ್ ಸ್ವಾಗತಿಸಿದರು.  ವಿನುಷಾ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಭಾಷಣಕಾರರಾಗಿ ಕುಶಲ ಸದಾಶಿವ ಇವರು ಆಟಿಯ ದಿನಗಳ ಮಹತ್ವದ ಬಗ್ಗೆ ಸಾಂಧರ್ಬಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಅನುಷಾ ಸಂದೀಪ್ ವಂದನಾರ್ಪಣೆಗೈದರು. ಸುಮಾರು ಐವತ್ತಕ್ಕೂ ಮಿಕ್ಕಿ ಮಹಿಳಾ ಘಟಕದ ಸದಸ್ಯರುಗಳು ಸುಮಾರು ಐವತ್ತಕ್ಕೂ ಮಿಕ್ಕಿ ಭಕ್ಷಗಳನ್ನು ಸ್ವಯಂ ಪ್ರೇರಿತರಾಗಿ ಮಾಡಿ ತಂದಿದ್ದರು. ನಾರಾಯಣ ಕೋಟ್ಯಾನ್, ಜಿನ್ನಪ್ಪ ಪೂಜಾರಿ, ಕೆಲ್ಲಪುತ್ತಿಗೆ ಇವರನ್ನು ಗೌರವಿಸಲಾಯಿತು.