ಪುತ್ತೂರು, ಏಪ್ರಿಲ್ 25: ಸಂತ ಫಿಲೋಮಿನಾ ಕಾಲೇಜಿನ ಬೆಳ್ಳಿ ಹಬ್ಬ ಸಭಾಭವನದಲ್ಲಿ  ಅಂತರಾಷ್ಟ್ರೀಯ ಇಂಗ್ಲಿಷ್ ಭಾಷಾ ದಿನವನ್ನು ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಪ್ರೊಫೆಸರ್ ಲಿಯೋ ನೊರೋನ್ನ ರವರು, ಇಂಗ್ಲಿಷ್ ಭಾಷಾ ದಿನವನ್ನು ವಾರ್ಷಿಕವಾಗಿ ಏಪ್ರಿಲ್ 23 ರಂದು ಆಚರಿಸಲಾಗುತ್ತದೆ, ಇದನ್ನು ಸಾಂಪ್ರದಾಯಿಕವಾಗಿ ಇಂಗ್ಲಿಷ್ ನಾಟಕಕಾರ ಮತ್ತು ಕವಿ ವಿಲಿಯಂ ಶೇಕ್ಸ್‌ಪಿಯರ್ ರ ಜನ್ಮದಿನ ಮತ್ತು ಮರಣದ ದಿನಾಂಕವಾಗಿ ಆಚರಿಸಲಾಗುತ್ತದೆ.  ಇಂಗ್ಲೀಷ್ ಸಾಹಿತ್ಯಕ್ಕೆ ಶೇಕ್ಸ್‌ಪಿಯರ್ ರ  ಕೊಡುಗೆ ಅಪಾರ ಅವರು ತಮ್ಮ ನಾಟಕ ಹಾಗೂ ಕವಿತೆಗಳ ಮೂಲಕ ಸಾರಿದ ಸಂದೇಶವು ಇಂದಿಗೂ ಪ್ರಸ್ತುತ ಎಂದು ಹೇಳಿದರು.  

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ವ. ಡಾ.ಆಂಟೋನಿ ಪ್ರಕಾಶ್ ಮೊಂತೇರ ರವರು ಜ್ಞಾನಕ್ಕಿಂತ ಕುತೂಹಲ ಯಾವಾಗಲೂ ಮುಖ್ಯ. ಇಂಗ್ಲೀಷ್ ಭಾಷೆಯಲ್ಲಿ ಸಂವಹನ ನಡೆಸುವುದು ಇಂದಿನ ವೇಗದ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಅತಿ ಅಗತ್ಯವಾಗಿದೆ. ಕಾರ್ಯನಿರ್ವಹಿಸುತ್ತದೆ.ಈ ಭಾಷೆ ನಮ್ಮ ವೈಯಕ್ತಿಕ, ಶೈಕ್ಷಣಿಕ ಮತ್ತು ವೃತ್ತಿಪರ ಬೆಳವಣಿಗೆಗೆ ಎಷ್ಟು ಅವಿಭಾಜ್ಯ ಅಂಗವಾಗಿದೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ಇದು ಸಂಸ್ಕೃತಿಗಳ ನಡುವಿನ ಸೇತುವೆಯಾಗಿ, ಕಲಿಕೆಗೆ ಒಂದು ಮಾರ್ಗವಾಗಿ ಮತ್ತು ಪ್ರಪಂಚದಾದ್ಯಂತದ ಅಸಂಖ್ಯಾತ ಅವಕಾಶಗಳಿಗೆ ಕೀಲಿಯಾಗಿ ಕಾರ್ಯ ನಿರ್ವಹಿಸುತ್ತದೆ. ಈ ಭಾಷೆಯಲ್ಲಿರುವ ಸದಭಿರುಚಿಯ ಸಾಹಿತ್ಯವನ್ನು ಓದಬೇಕು” ಎಂದು ಹೇಳಿದರು. 

ಈ ಸಂದರ್ಭದಲ್ಲಿ ಮಾಜಿ ಪ್ರಾಂಶುಪಾಲರಾದ ಪ್ರೊ| ಲಿಯೋ ನೊರೋನ್ನ ರವರನ್ನು  ಸನ್ಮಾನಿಸಲಾಯಿತು. ಸನ್ಮಾನ ಪತ್ರವನ್ನು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಭಾರತಿ ಎಸ್ ರೈ ವಾಚಿಸಿದರು. ಕಾಲೇಜಿನ ಪ್ರದರ್ಶನ ಕಲಾಘಟಕದ  ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿದರು. ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು ಸಹಾಯಕ ಪ್ರಾಧ್ಯಾಪಕರಾದ ವಿನಿಲ್ ರೋಹನ್ ಡಿಸೋಜ ರವರು ವಾಚಿಸಿ, ನೋವಿಲ್ಲಿನ್ ಡಿಸೋಜ ಸ್ವಾಗತಿಸಿ, ಸುಷ್ಮಾ ಕ್ರಾಸ್ತ ವಂದಿಸಿದರು. .ಅನುಷ ಭಾರ್ಗವಿ  ಹಾಗೂ ಟಿನ್ಸಿ ಥಾಮಸ್    ಕಾರ್ಯಕ್ರಮ ನಿರೂಪಿಸಿದರು. 

ಉಪ ಪ್ರಾಂಶುಪಾಲರಾದ ಡಾ. ವಿಜಯಕುಮಾರ್ ಮೊಳೆಯಾರ್, ಡಾ.ನಾರ್ಬರ್ಟ್ ಮಸ್ಕರೇನ್ಹಸ್, ರಿಜಿಸ್ಟ್ರಾರ್ (ಶೈಕ್ಷಣಿಕ) ಡಾ ವಿನಯಚಂದ್ರ, ರಿಜಿಸ್ಟ್ರಾರ್( ಪರೀಕ್ಷಾಂಗ), ಉಪನ್ಯಾಸಕರಾದ ವಾಸುದೇವ ಎನ್, ಸುರಕ್ಷಾ, ಡಾ. ರಾಧಾಕೃಷ್ಣ ,ಪ್ರಶಾಂತಿ, ಡಾ ಚಂದ್ರಶೇಖರ್ ಡಾ. ಡಿಂಪಲ್ ಜೆನಿಫರ್ ಫರ್ನಾಂಡಿಸ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಾದ ಅನ್ಲೀಶ್ ಯೋ ವಾಯ್ಸ್, ಮಿಸ್ಟಿಕ್ ಮಾಸ್ಕ್, ಹೆನ್ನ ಆನ್ ಸ್ಲೀಕ್, ವಿಜ್ವಲ್ ವಾಯ್ಸಸ್, ಬೀಟ್ ಬ್ಲೇಸ್ ,ಕ್ರಸ್ಸಂದೋ ಕ್ಲಾಶ್, ದ ವರ್ಲ್ಡ್ ಒಡೆಸಿ ,ನಾಲೆಡ್ಜ್ ಅರೇನಾ ,ಮೈಮು ಮೇನಿಯ ಆಯೋಜಿಸಲಾಗಿತ್ತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಸಂಸ್ಕೃತಿಕ ಕಾರ್ಯಕ್ರಮದೊಂದಿಗೆ ಸಮಾರಂಭ ಮುಕ್ತಾಯಗೊಂಡಿತು