ಕಾರ್ಕಳ, ಡಿಸೆಂಬರ್ 21:  ಕ್ರಿಯೇಟಿವ್‌ ಪಿ.ಯು ಕಾಲೇಜಿನಲ್ಲಿ ಬುಧವಾರದಂದು ʼಸ್ವಚ್ಚ ಭಾರತʼ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಹಿರ್ಗಾನ ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಸಂತೋಷ್‌ ಕುಮಾರ್‌ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಕೈ ಗ್ಲೌಲ್ಸ್‌ ಹಂಚುವ ಮೂಲಕ ಉದ್ದಿಕ್ತವಾಗಿ ಚಾಲನೆ ನೀಡಿದರು. 

ಸ್ವಚ್ಚ ಭಾರತ ಪರಿಕಲ್ಪನೆಯು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಕನಸಾಗಿದ್ದು ಸನ್ಮಾನ್ಯ ಪ್ರಧಾನ ಮಂತ್ರಿ  ನರೆಂದ್ರ ಮೋದಿಯವರು ಸಾಕಾರ ಮಾಡುವಲ್ಲಿ ಹೆಜ್ಜೆಯಿಟ್ಟು ಸಫಲರಾಗಿದ್ದಾರೆ ಎಂದರು.  ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌, ಸಹ ಸಂಸ್ಥಾಪಕರಾದ  ಗಣನಾಥ್‌ ಶೆಟ್ಟಿ ಹಾಗೂ ಸ್ಥಳೀಯರಾದ ಜಾನ್‌ ಪಿಂಟೋ, ಬೋಧಕ – ಬೋಧಕೇತರ ವೃಂದದವರು ಪಾಲ್ಗೊಂಡಿದ್ದರು.