ಮಣಿಪುರದ ಯೆರಿಪೋಕ್‌ನ ತಂಬುಲ್ನಿ ಹೈಯರ್ ಪ್ರೈಮರಿ ಶಾಲೆಯ ಮಕ್ಕಳು ಎರಡು ಬಸ್ಸುಗಳಲ್ಲಿ ಶೈಕ್ಷಣಿಕ ಪ್ರವಾಸ ಹೋಗುವಾಗ ಒಂದು ಬಸ್ ಅಪಘಾತಕ್ಕೆ ಒಳಗಾಗಿ 15 ಮಕ್ಕಳು ಸಾವಿಗೀಡಾದರು ಹಾಗೂ 25ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡರು.
ಬಿಷ್ಣುಪುರ್ ಕೌಪುಂ ರಸ್ತೆಯಲ್ಲಿ ಲಾಂಗ್ಸಾಯ್ ಟುಬುಂಗ್ ಬಳಿ ಬಸ್ ಅಪಘಾತಕ್ಕೆ ಒಳಗಾಗಿದೆ. 15 ಮಕ್ಕಳ ಶವ ಎತ್ತಲಾಗಿದೆ. ಗಾಯಗೊಂಡ ಮಕ್ಕಳನ್ನು ಇಂಪಾಲ್ ಮೆಡಿಸಿಟಿ ಆಸ್ಪತ್ರೆಗೆ ಸಾಗಿಸಲಾಯಿತು. ಈ ಆಸ್ಪತ್ರೆಗೆ 22 ಮಕ್ಕಳನ್ನು ತರಲಾಗಿದೆ. ಉಳಿದ ಸಾಮಾನ್ಯ ಗಾಯಗೊಂಡ ಮಕ್ಕಳಿಗೆ ಸ್ಥಳೀಯವಾಗಿ ಚಿಕಿತ್ಸೆ ನೀಡಲಾಗಿದೆ.