ಕಾರ್ಕಳ: ಸರ್ಕಾರಿ ಪದವಿ ಪೂರ್ವ ಕಾಲೇಜು, ಸಾಣೂರು ಇಲ್ಲಿನ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ವತಿಯಿಂದ ಆಗಸ್ಟ್ 14, 2025ರಂದು ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ಕುರಿತು ಕಾರ್ಯಗಾರವನ್ನು ಆಯೋಜಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಎ.ಎಲ್.ಟಿ ಸಾವಿತ್ರಿ ಮನೋಹರ್ ಅವರು ಪ್ರಥಮ ಚಿಕಿತ್ಸೆಯ ವಿವಿಧ ವಿಧಾನಗಳನ್ನು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯಿಂದ ವಿವರಿಸಿದರು. ಜೊತೆಗೆ ರೋವರ್ಸ್ ಹಾಗೂ ರೇಂಜರ್ಸ್ ಕಾರ್ಯವಿಧಾನ ಮತ್ತು ನಿಯಮಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಸುಚೇತ ಅಧ್ಯಕ್ಷತೆ ವಹಿಸಿದ್ದರು. ರೇಂಜರ್ಸ್ ನಾಯಕಿ ಸ್ಮಿತಾ ಜೋಷ್ಮ ಫರ್ನಾಂಡಿಸ್ ಸ್ವಾಗತಿಸಿ, ರೋವರ್ಸ್ ಸ್ಕೌಟ್ ನಾಯಕ ಅರವಿಂದ ಕೆ.ಎನ್ ವಂದಿಸಿದರು.