ತಲಪಾಡಿ ಬಳಿಯ ಉದ್ಯಾವರ ಮೂಲದ ದಂಪತಿಯನ್ನು ಅವರ ಎರಡನೆಯ ಮಗನೇ ಕೊಲೆ ಮಾಡಿ ಪರಾರಿಯಾದ ಘಟನೆ ಬೆಂಗಳೂರಿನ ಬ್ಯಾಟರಾಯನಪುರದ ಸೌದೆ ಮಂಡಿ ಬಳಿ ನಡೆದಿದೆ.
ಮಗನಿಂದ ಕೊಲೆಯಾದವರು 61ರ ಭಾಸ್ಕರ್ ಮತ್ತು 60ರ ಶಾಂತಾ. ಶಾಂತಾ ಐಟಿಐ ಕೆಲಸದಿಂದ ಇತ್ತೀಚಿಗೆ ನಿವೃತ್ತರಾಗಿದ್ದರು. ಭಾಸ್ಕರ್ ಹೋಟೆಲೊಂದರಲ್ಲಿ ಮ್ಯಾನೇಜರ್ ಆಗಿದ್ದರು. ಸೋಮವಾರ ರಾತ್ರಿ ಕೊಲೆ ನಡೆದಿದ್ದು, ಮಂಗಳವಾರ ಬೆಳಕಿಗೆ ಬಂದಿದೆ.
ಮೊದಲ ಮಗ ಸಚಿನ್ ಒಳ್ಳೆ ಕೆಲಸದಲ್ಲಿದ್ದು ತಿಂಡ್ಲುನಲ್ಲಿ ವಾಸವಿದ್ದ. ಕರೆಗೆ ತಾಯಿ ತಂದೆಯಿಂದ ಉತ್ತರ ಬಾರದ್ದರಿಂದ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಎರಡನೆಯ ಮಗ 26ರ ಶರತ್ ಓದನ್ನು ನಡುವೆ ಬಿಟ್ಟಿದ್ದು, ಕುಡಿದು ಮನೆಯಲ್ಲಿ ಹಣಕ್ಕಾಗಿ ಗಲಾಟೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದ. ಕೊನೆಗೆ ಸುತ್ತಿಗೆಯಿಂದ ಹೊಡೆದು ಕೊಂದು ಪರಾರಿಯಾಗಿದ್ದಾನೆ. ಪೋಲೀಸರು ಹುಡುಕುತ್ತಿದ್ದಾರೆ.