ಇಂದು ಗುರುವಾರ ಪೋರ್ಟೋರಿಕಾದ ಎಮಿಲಿಯೋ ಫ್ಲಾರಸ್ ಮಾರ್ಕ್ವೆಜ್ ಜಗತ್ತಿನ ಅತಿ ಹಿರಿಯ ದೊಡ್ಡಜ್ಜ ಎಂದು ಗಿನ್ನೆಸ್ ದಾಖಲೆ ಪುಸ್ತಕವನ್ನು ಸೇರಿದರು.

ಹಿಂದೆ ಈ ದಾಖಲೆ ಹೊಂದಿದ್ದ ರೊಮೇನಿಯಾದ ಡುಮಿತ್ರು ಕೊಮಾನೆಸ್ಕ್ ಅವರು 2020ರ ಜೂನ್ 27ರಂದು ನಿಧನರಾಗಿದ್ದರು. ಆಗ ಅವರ ಪ್ರಾಯ 111 ವರುಷ 219 ದಿವಸಗಳು.

1908ರಲ್ಲಿ ಜನಿಸಿದ ಎಮಿಲಿಯೋರಿಗೆ ಇಂದು 112 ವರುಷ 326 ದಿನ ತುಂಬುತ್ತಿದೆ. ಮೂರು ವರುಷ ಶಾಲೆಗೆ ಹೋದ ಇವರು ಕಬ್ಬಿನ ಗದ್ದೆಯ ದುಡಿಮೆಗಾರರು. ಇತರರನ್ನು ಪ್ರೀತಿಸಿರಿ, ಎಲ್ಲರ ಬಗೆಗೆ ಸಹಾನುಭೂತಿ ಹೊಂದಿರಿ ಎಂದು ತಂದೆ ಕಲಿಸಿ ಕೊಟ್ಟುದನ್ನು ಪಾಲನೆ ಮಾಡಿದ್ದೇ ನನ್ನ ದೀರ್ಘಾಯುಷ್ಯದ ಗುಟ್ಟು ಎನ್ನುತ್ತಾರೆ ಇವರು.