ಆಪರೇಶನ್ ಕಮಲದಂಥ ನಾಚಿಕೆಗೇಡು ಕಾರ್ಯಾಚರಣೆ, ಎಲ್ಲದಕ್ಕೂ ಕಮಿಶನ್, ಬ್ರಹ್ಮಾಂಡ ಭ್ರಷ್ಟಾಚಾರ, ರೈತರಿಗೆ ವಂಚನೆ ಇದಕ್ಕೆಲ್ಲ ಆರೆಸ್ಸೆಸ್ ಶಾಖೆಗಳಲ್ಲಿ ತರಬೇತಿ ತೆಗೆದುಕೊಂಡಿರಾ ಎಂದು ಬಿಜೆಪಿ ಮುಖಂಡರನ್ನು ಮಾಜೀ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ನನ್ನನ್ನು ಸಂಘಕ್ಕೆ ಬಂದು ನೋಡಿ ಎಂದಿದ್ದಾರೆ. ಸಂಘದಲ್ಲಿ ಇದ್ದು ಆರೆಸ್ಸೆಸ್ ಜನರ ಹೂರಣ ತಿಳಿದವರು ಬರೆದ ಪುಸ್ತಕ ಓದಿ ನನಗೆ ಅದರ ಜಾತೀಯ ಬಲೆ ಅರ್ಥವಾಗಿದೆ. ಕುಟುಂಬ ರಾಜಕೀಯ ಮಾಡುವ ಜನ ಬಿಜೆಪಿಯಲ್ಲಿ ಹೆಜ್ಜೆ ಹೆಜ್ಜೆಗೆ ಇದ್ದಾರೆ. ಅದನ್ನೂ ಆರೆಸ್ಸೆಸ್ ಕಲಿಸಿರಬಹುದು. ಶಿಸ್ತಿನಿಂದ ವಂಚಿಸುವ ರಾಜಕಾರಣ ನಿಮ್ಮದು ಎಂದು ಕುಮಾರಸ್ವಾಮಿಯವರು ಸಿ. ಟಿ. ರವಿ, ನಳಿನ್ ಕಟೀಲ್ ಮೊದಲಾದವರಿಗೆ ಬಿಸಿ ಮುಟ್ಟಿಸಿದ್ದಾರೆ.