ಕರ್ನಾಟಕದಲ್ಲಿ ಕಳೆದ ಐದು ವರುಷಗಳಲ್ಲಿ ಅಡಕೆ ಬೆಳೆಯುವ ಪ್ರದೇಶವು 2,79,000 ಹೆಕ್ಟೇರಿನಿಂದ 7,31,650 ಹೆಕ್ಟೇರಿಗೆ ವಿಸ್ತರಣೆ ಕಂಡಿದೆ ಎಂದು ತೋಟಗಾರಿಕೆ ಇಲಾಖೆಯ ಅಂಕಿ ಅಂಶಗಳಿಂದ ತಿಳಿದು ಬಂದಿದೆ. 

ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹಿಂದೆ ಬೆಳೆಯುತ್ತಿದ್ದರು. ಮುಂದೆ ದಾವಣಗೆರೆ, ಚಿತ್ರದುರ್ಗ, ತುಮಕೂರು, ಹಾಸನ, ಮೈಸೂರು ಜಿಲ್ಲೆಗಳಿಗೆ ವಿಸ್ತರಣೆ ಕಂಡಿತು. ಈಗ ಅಡಕೆ ಕೃಷಿ ಮಂಡ್ಯದ ಕಬ್ಬಿನ‌ ಗದ್ದೆ ಕಬಳಿಸತೊಡಗಿದೆ.

ಭತ್ತದ ಗದ್ದೆಗಳ ಸಹಿತ ಆಹಾರ ಬೆಳೆಯುವ ಹೊಲ ಗದ್ದೆಗಳು ಅಡಕೆ ತೋಟಗಳಾಗಿವೆ ಇದು ಮುಂದೆ ಆಹಾರ ಕೊರತೆಗೆ ಹಾದಿ ಮಾಡಬಹುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ದಶಕದಲ್ಲಿ ಅಡಕೆ ತೋಟಗಳು ದುಪ್ಪಟ್ಟಾಗಿ 32,582 ಹೆಕ್ಟೇರ್ ಮುಟ್ಟಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 20,000 ಇದ್ದ ಅಡಕೆ ತೋಟಗಳ ವ್ಯಾಪ್ತಿ 47,000 ಹೆಕ್ಟೇರ್ ತಲುಪಿದೆ. ದಾವಣಗೆರೆ ಜಿಲ್ಲೆಯಲ್ಲಿ 5 ವರುಷದಲ್ಲಿ ಮತ್ತೆ 40,890 ಹೆಕ್ಟೇರ್ ಅಡಕೆ ವಶವಾಗಿದೆ. ಅಡಕೆ ಕ್ವಿಂಟಾಲಿಗೆ 50,000 ದಾಟುತ್ತಲೇ ಸರಕಾರಿ ನೌಕರರ ಸಹಿತ ಹಲವರು ಅಡಕೆ ನೆಡುತ್ತಿದ್ದಾರೆ. ಅರಣ್ಯ ಒತ್ತುವರಿ ಸಹ ನಡೆದಿದೆ.