2023ರ ಅಕ್ಟೋಬರ್ 7ನೇ ತಾರೀಕಿನಿಂದ ಆರಂಭವಾದ ಇಸ್ರೇಲ್ ಹಮಾಸ್ ಯುದ್ಧದಲ್ಲಿ ನಿನ್ನೆಯವರೆಗೆ ಒಟ್ಟು 24,100 ಜನರು ಸಾವಿಗೀಡಾಗಿದ್ದು, 60,834 ಮಂದಿ ಗಾಯಗೊಂಡಿದ್ದಾರೆ.

ಸತ್ತವರಲ್ಲಿ ಮತ್ತು ಗಾಯಗೊಂಡವರಲ್ಲಿ ಹೆಚ್ಚಿನವರು ಹೆಂಗಸರು ಮತ್ತು ಮಕ್ಕಳು ಎನ್ನುವುದು ಆತಂಕದ ಸಂಗತಿಯಾಗಿದೆ. ಇವರ ಪ್ರಮಾಣ 70 ಶೇಕಡಾ. ನಿನ್ನೆ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ 24 ಗಂಟೆಗಳಲ್ಲಿ 132 ಜನರು ಜೀವ ತೆತ್ತಿದ್ದಾರೆ. ಗಾಜಾ ನಗರದಲ್ಲೇ 33 ಮಂದಿಯ ಶವ ಸಿಕ್ಕಿದೆ.