ಕಾರ್ಕಳ: ಅನೈತಿಕ ಪೋಲೀಸುಗಿರಿ ನಡೆಸಿ ವೈದ್ಯರಿಗೆ ತೊಂದರೆ ನೀಡಿದ ಕಾರ್ಕಳ ತಾಲೂಕಿನ ಹಿಂದೂ ಜಾಗರಣ ವೇದಿಕೆಯ ಐವರನ್ನು ಪೋಲೀಸರು ಬಂಧಿಸಿ ಕೋರ್ಟಿಗೆ ಹಾಜರು ಪಡಿಸಿದರು. ಸಂತೋಷ್ ನಂದಳಿಕೆ, ಕಾರ್ತಿಕ್ ಪೂಜಾರಿ, ಮಿಯ್ಯಾರು  ಸನಿಲ್ ಮೂಲ್ಯ ಹಾಗೂ ಸಂದೀಪ್ ಪೂಜಾರಿ, ತೆಳ್ಳಾರು ಸುಜಿತ್ ಸಪಲಿಗ ಬಂಧಿತರು.

ಮಂಗಳೂರಿನ ಆಸ್ಪತ್ರೆ ಕಾಲೇಜೊಂದರ ನಾಲ್ಕು ಪುರುಷ ಮತ್ತು ಇಬ್ಬರು ಮಹಿಳಾ ವೈದ್ಯರು ಕಾರಿನಲ್ಲಿ ಶೃಂಗೇರಿಗೆ ಹೋಗಿದ್ದಾರೆ. ಹೋಗುವಾಗಲೇ ಹಿಂಜಾವೇ ದುರುಳರು ಅವರನ್ನು ಹಿಂಬಾಲಿಸಿದ್ದಾರೆ. ಹಿಂತಿರುಗುವಾಗ ಕಾರ್ಕಳ ಗಡಿಯ ಕುಂಟಲ್ಪಾಡಿ ಬಳಿ ವೈದ್ಯರ ಕಾರು ತಡೆದು ಬೈಗುಳ ಸುರಿಸಿದ್ದಾರೆ. ಕೂಡಲೆ ವೈದ್ಯೆಯರು 112ಕ್ಕೆ ಕರೆ ಮಾಡಿದ್ದಾರೆ. ಸಕಾಲಕ್ಕೆ ಪೋಲೀಸರು ಬಂದರು ಎನ್ನುವುದೇ ವಿಶೇಷ.